ರೌಡಿಶೀಟರ್ ನೌಫಲ್ ಬಜಾಲ್ ಯಾನೆ ತುಕ್ಕ ನೌಫಲ್ ಮರ್ಡರ್

Picture of RB NEWS

RB NEWS

Bureau Report

ಉಪ್ಪಳ: ಮಂಗಳೂರು ಮೂಲದ ರೌಡಿಶೀಟರ್ ಕೊಲೆ ಆರೋಪಿ ನೌಫಲ್ ಬಜಾಲ್ ಯಾನೆ ತುಕ್ಕ ನೌಫಲ್(45) ಎಂಬಾತನನ್ನು ಕಾಸರಗೋಡು ಉಪ್ಪಳದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಪ್ಪಳ ರೈಲು ಗೇಟಿನ ಬಳಿ ಶನಿವಾರ ಬೆಳಿಗ್ಗೆ ಮೃತದೇಹವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿ ಮಂಗಳೂರು ಬಜಾಲ್ ನಿವಾಸಿ ನೌಫಲ್ ಆಗಿದ್ದು, ಮೂರು ಕೊಲೆ ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ಪೊಲೀಸರು ದೃಢೀಕರಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿಯಾದುದರಿಂದ ಇದು ಕೊಲೆ ಅಲ್ಲ ಎನ್ನಲಾಗದೆಂದೂ ಪೊಲೀಸರು ಶಂಕಿಸಿದ್ದಾರೆ. ಮಂಜೇಶ್ವರ ಪೋಲೀಸ್ ಇನ್ಸ್ ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.


ಮೃತದೇಹ ಉಪ್ಪಳ ಗೇಟ್ ಬಳಿ ಪತ್ತೆಯಾಗಿತ್ತು. ಶರ್ಟ್ ಬಿಚ್ಚಿ ಮತ್ತೊಂದು ಜಾಗದಲ್ಲಿಟ್ಟ ಸ್ಥಿತಿಯಲ್ಲಿ ಮೃತದೇಹವಿತ್ತು. ಮೃತದೇಹ ಧರಿಸಿದ್ದ ಪ್ಯಾಂಟಿನ ಜೇಬಿನಿಂದ ಸಿರಿಂಜ್ ಮತ್ತು ವಾಹನ ದ ಕೀ ಗೊಂಚಲು ದೊರೆತಿತ್ತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top