ರೋಟರಿ ಆಂಗ್ಲ ಮಾಧ್ಯಮ ಸಿ ಬಿ ಎಸ್ ಇ ಗೆ ರಾಷ್ಟ್ರಮಟ್ಟದ ಮನ್ನಣೆ
ಮೂಡುಬಿದಿರೆ: ದೇಶಾದ್ಯಂತದ ಸಿ ಬಿ ಎಸ್ ಇ ಶಾಲೆಯ 10ನೇ ತರಗತಿ ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಕ್ವಿಜ್ ಸ್ಪರ್ಧೆಯನ್ನು ರಾಷ್ಟ್ರಮಟ್ಟದಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಸಿ ಬಿ ಎಸ್ ಇ ಶಾಲೆಯ ರಿಷು ಅನ್ ಡಿ ಸೋಜ ಪ್ರಥಮ ಸ್ಥಾನವನ್ನು, ಸುಹಾನ ಹಲೀಮ ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆಂದು ರೋಟರಿ ಶಾಲೆಗಳ ಅಧ್ಯಕ್ಷ ನಾರಾಯಣ ಪಿಎಂ ಅವರು ಹರ್ಷ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.





































