ರೈಲಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಗೆ ಕಿರುಕುಳ : ನಾಟೆಕಲ್ ಇಬ್ರಾಹಿಂ ಬಾದುಷಾ ಬಂಧನ

Picture of RB NEWS

RB NEWS

Bureau Report

ಕಾಸರಗೋಡು : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಆರೋಪಿಯನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳೂರು ನಾಟೆಕಲ್ ನ ಇಬ್ರಾಹಿಂ ಬಾದುಷಾ (28) ಬಂಧಿತ ಆರೋಪಿ. ಮಂಗಳೂರಿಗೆ ತೆರಳುತ್ತಿದ್ದ ವೆಸ್ಟ್ ಕೋಸ್ಟ್ ರೈಲಿ ನಲ್ಲಿ ಘಟನೆ ನಡೆದಿದೆ. ರೈಲು ಮುಂಜಾನೆ 5 ಗಂಟೆ ಸುಮಾರಿಗೆ ನೀಲೇಶ್ವರಕ್ಕೆ ತಲಪಿದಾಗ ಅದೇ ರೈಲಿ ನಲ್ಲಿ ಪ್ರಯಾಣಿಸುತ್ತಿದ್ದ ಯುವಕ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ವಿದ್ಯಾರ್ಥಿನಿ ಬೊಬ್ಬೆ ಹಾಕಿದಾಗ ಯುವಕ ತಪ್ಪಿಸಿ ಕೊಂಡಿದ್ದು, ಕೂಡಲೇ ಯುವತಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಕಾಞಾಂಗಾಡ್ ಗೆ ರೈಲು ತಲಪಿದಾಗ ಆತ ಇನ್ನೊಂದು ಬೋಗಿಗೆ ಹತ್ತಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರು. ಪೊಲೀಸರು ಆರೋಪಿಯನ್ನು ಮಂಜೇಶ್ವರ ಠಾಣೆಗೆ ಕೊಂಡೊಯ್ಯು ತ್ತಿದ್ದಾಗ ಪೊಲೀಸ ರಿಂದ ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top