ರೆಂಜಾಳ : ಶಿಕ್ಷಕ ವಿನಾಯಕ ನಾಯ್ಕ‌ ಅವರಿಗೆ ರಾಜ್ಯ ಪ್ರಶಸ್ತಿ

Picture of RB NEWS

RB NEWS

Bureau Report

“ಜಗತ್ತು ಡಿಜಿಟಲ್ ಯುಗದಲ್ಲಿ ಸಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ಸ್ಫೋಟದ ಯುಗದಲ್ಲಿದೆ, ಅಂತರ್ಜಾಲದಿಂದ ಜಗತ್ತಿನ ಜನರೊಂದಿಗೆ ತೀವ್ರತರವಾದ ಸಮ್ಮಿಳಿತ ಸಾಧ್ಯವಾಗಿದೆ. ಸಾಮಾಜಿಕ ಜಾಲತಾಣಗಳನ್ನು ಸಾಧ್ಯವಿರ ಬಹುದಾದ ಎಲ್ಲ ದಾನಿಗಳ ಅನುದಾನವನ್ನು ಬಳಸಿ ಹಳ್ಳಿಯ ಸರಕಾರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಡಿಜಿಟಲ್ ಲ್ಯಾಬ್ “ಸಾಕಾರಗೊಳಿಸಿ ಉಡುಪಿ ಜಿಲ್ಲೆಯಲ್ಲಿಯೇ ಸಮಾಜ ವಿಜ್ಞಾನಕ್ಕೆ ಹೊಸ ಮನ್ವಂತರ ಸೃಷ್ಟಿ ಮಾಡಿ, ಶಿಕ್ಷಕ ವಿದ್ಯಾರ್ಥಿಗಳಲ್ಲಿ ಕ್ರಾಂತಿಕಾರಿಕ ಪ್ರೇರಣೆಗೆ ಕಾರಣಕರ್ತನಾಗಿದ್ದೇನೆ.

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನಿಂದ 15 ಕಿಲೋಮೀಟರ್ ದೂರದಲ್ಲಿರುವ ರೆಂಜಾಳ ಸುಂದರವಾದ ಹಳ್ಳಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ನಾನು. ಕಳೆದ ಹತ್ತು ವರ್ಷಗಳಿಂದ ಅವಿರತ ಪ್ರಯತ್ನ ಸತತ ಪರಿಶ್ರಮದ ಫಲವಾಗಿ ಇಡೀ ಜಿಲ್ಲೆಗೆ ಮೊಟ್ಟ ಮೊದಲ “ಸಮಾಜ ವಿಜ್ಞಾನ ಡಿಜಿಟಲ್ ಲ್ಯಾಬ್ ಅನ್ನು ಸಾಕಾರಗೊಳಿಸಿದ್ದೇನೆ.ರಾಜ್ಯದಲ್ಲಿ ಕೇವಲ ಬೆರಳೆಣಕೆಯಲ್ಲಿ ಮಾತ್ರ ಇರಬಹುದಾದ “ಸಮಾಜ ವಿಜ್ಞಾನ ಡಿಜಿಟಲ್ ಲ್ಯಾಬ್ ಇಡೀ ಜಿಲ್ಲೆಯಲ್ಲಿಯೇ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ದಾನಿಗಳ ನೆರವಿನಿಂದ ನಿರ್ಮಿಸಿದ ಏಕೈಕ ಡಿಜಿಟಲ್ ಲ್ಯಾಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಕ ತನ್ನ ವೃತ್ತಿಯಲ್ಲಿಕ್ರಿಯಾಶೀಲನಾಗಿದ್ದರೆ ಎಂತಹ ಸಾಧನೆಯನ್ನಾದರೂ ಸಾಧಿಸಬಲ್ಲ ಎನ್ನುವುದಕ್ಕೆ ನನ್ನ ಕೆಲಸ ಮಾದರಿಯಾಗಿದೆ. ಈ ನನ್ನ ಲ್ಯಾಬ್ ಕೇವಲ ಚಾರ್ಟು ಗಳಿಂದ ತುಂಬಿದ ಲ್ಯಾಬ್ ಆಗಿರದೆ. ಆನ್ ಲೈನ್ ಪಾಠಗಳು, ಮೆಂಡಾ ಫೌಂಡೇಶನ್ ನ ವಿಡಿಯೊ ಪಾಠಗಳು, ಡಿಜಿಟಲ್ ಸಂಪನ್ಮೂಲಗಳನ್ನು, ಡಿಜಿಟಲ್ ಚಾರ್ಟ್ ಹಾಗೂ ಡಿಜಿಟಲ್ ಪ್ಲೆಕ್ಸ್ ಗಳನ್ನು, ಸ್ಮಾರ್ಟ್ ಕ್ಲಾಸ್ ಗಳನ್ನು ಒಳಗೊಂಡಿರುವುದು ವಿಶೇಷ.

ಕಳೆದ ಐದು ವರ್ಷಗಳಿಂದಲೂ ಸಮಾಜ ವಿಜ್ಞಾನಕ್ಕೆ ಒಂದು ಲ್ಯಾಬ್ ಬೇಕು ಎಂದು ಕನಸನ್ನು ಕಂಡು, ನನಸಾಗಿಸಲು ಅನೇಕ ದಾನಿಗಳ ನೆರವಿನಿಂದ ಈ ಲ್ಯಾಬ್ ನಿರ್ಮಿಸಿದ್ದೇನೆ. ಮಣಿಪಾಲ್ ಫೌಂಡೇಷನ್ನ ನೆರವಿನಿಂದ ಸುಮಾರು 70000 ಮೌಲ್ಯದ ಕಂಪ್ಯೂಟರ್ ಪ್ರಾಜೆಕ್ಟರ್ ಪರಿಕರಗಳು, ಮೆಂಡಾ ಪೌಂಡೇಷನ್‌ತಿಯಿಂದ 88000 ಮೌಲ್ಯದ ಎಲ್ಲಡಿ ಟಿವಿ, ವಿಡಿಯೋ ಪಾಠಗಳ ಪರಿಕರಗಳು, ತಾಲೂಕು ಪಂಚಾಯತ್ ಅನುದಾನದಿಂದ 100000 ರೂ (ಒಂದು ಲಕ್ಷ) ಮೌಲ್ಯದ ಮಡಚುವ ಕುರ್ಚಿ, ಟೇಬಲ್, ಅಲ್ವೇರಾ ಗಳು 2000೦ ಮೌಲ್ಯದ ಯುಪಿಎಸ್ ಪರಿಕರಗಳು 15000 ರೂಪಾಯಿ ಮೌಲ್ಯದ ಡಿಜಿಟಲ್ ಚಾರ್ಟ್ ಗಳನ್ನು 10000 ಮೌಲ್ಯದ ಕರೋಕೆ ಸ್ಪೀಕರ್ ಹೊಂದಿದ್ದು ಎಂಎಲ್‌ಎ ಅನುದಾನದಿಂದ 2000೦೦ ಮೌಲ್ಯದ

ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಬೋರ್ಡ್ ಒಳಗೊಂಡ ಸುಸಜ್ಜಿತ ಸಮಾಜ ವಿಜ್ಞಾನ ಡಿಜಿಟಲ್ ಲ್ಯಾಬ್ ಲ್ಯಾಬ್ ದಾನಿಗಳ ನೆರವಿನಿಂದ ಮಾಡಿದ್ದೇನೆ ಎಂಬುದೇ ವಿಶೇಷ. ಕಾರ್ಕಳ ಪೆರ್ವಾಜೆ ಶಾಲೆಯ ಸ್ಟುಡಿಯೋದಿಂದ ನೇರ ಪ್ರಸಾರಗೊಳ್ಳುವ ನನ್ನ “ಸಮಾಜ ವಿಜ್ಞಾನ ತರಗತಿಗಳು ಇಡೀಜಿಲ್ಲೆಯ ಶಾಲೆಯಲ್ಲಿಯೂ ಪ್ರಸಾರಗೊಳ್ಳುತ್ತಿದ್ದು, ಕಳೆದ ಹದಿನಾಲ್ಕು ವರ್ಷಗಳಲ್ಲಿ ಅನೇಕ ತರಬೇತಿಗಳಲ್ಲಿ, ಸಂಪನ್ಮೂಲ ವ್ಯಕ್ತಿಯಾಗಿ,ಮತದಾರ ಸಾಕ್ಷರತಾ ತಾಲೂಕು ನೋಡಲ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮಕ್ಕಳ ಪ್ರೇರಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಿರುವುದರ ಜೊತೆಗೆ, ಶಿಕ್ಷಕರ ತರಬೇತಿ, ಟಾಲ್ಪ ತರಬೇತಿ, ರಚನಾ ತರಬೇತಿ ಸಾಧನಾ ತರಬೇತಿ. ಗುರುಚೇತನ ತರಬೇತಿ. ಪ್ರಶ್ನೆ ಪತ್ರಿಕೆ ಕಾರ್ಯಾಗಾರ ,ವಿಷಯದ ಅನೇಕ ತರಬೇತಿಗಳನ್ನು ನಡೆಸಿರುವುದ್ದಲದೇ NMMS ತರಬೇತಿ ನೀಡಿ 12 ಮಕ್ಕಳು ಶಿಷ್ಯವೇತನ ಸೌಲಭ್ಯ ಪಡೆಯುತ್ತಿದ್ದಾರೆ. 66 ಮಕ್ಕಳನ್ನು ಹೊಂದಿರುವ ಈ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನನ್ನನ್ನು ನಾನು ತೊಡಿಸಿಕೊಂಡಿದ್ದೇನೆ. ಎಲ್ಲ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾದ ನಾನು, ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಅಪಾರವಾದ ಆಸಕ್ತಿಗೆ ಕಾರಣಕರ್ತರಾಗಿದ್ದೇನೆ. 2019-20, ಹಾಗು 2020-21 ನೇ ಸಾಲಿನಲ್ಲಿ ಗ್ರಾಮೀಣ ಭಾಗದ ಶಾಲೆಯ ವಿದ್ಯಾರ್ಥಿಗಳು ಶಾಲಾ ಇತಿಹಾಸದಲ್ಲೇ ಸತತವಾಗಿ ಎರಡು ಬಾರಿ “ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆಯಲ್ಲಿ “ರಾಜ್ಯ ಮಟ್ಟಕ್ಕೆ ಕೊಂಡೋಯ್ದ ಸಾಧನೆ ನನ್ನದಾಗಿದೆ.ಹಾಗು 2020-21 ನೇ ಸಾಲಿನಲ್ಲಿ ಗ್ರಾಮೀಣ ಶಾಲೆಯ ವಿದ್ಯಾರ್ಥಿ ಮತದಾರ ಸಾಕ್ಷರತಾ ಕ್ಲಬ್‌ನ ಅಡಿಯಲ್ಲಿ ಶಾಲಾ ಇತಿಹಾಸದಲ್ಲೇ ಮೊದಲ ಬಾರಿಗೆ “ಪ್ರಬಂಧ ಸ್ಪರ್ಧೆಯಲ್ಲಿ” ರಾಜ್ಯ ಮಟ್ಟಕ್ಕೆ ಕೊಂಡೋಯ್ದ ಸಾಧನೆ ನನ್ನದಾಗಿದೆ 2017-18 ರಲ್ಲಿ ಕಾರ್ಕಳ ತಾಲ್ಲೂಕು ಸಾಧಕ ಶಿಕ್ಷಕ ಪ್ರಶಸ್ತಿ 2020-21 ನೇ ಸಾಲಿನಲ್ಲಿ “ಉಡುಪಿ ಜಿಲ್ಲಾ ಮಟ್ಟದ ಶ್ರೇಷ್ಟ ಶಿಕ್ಷಕ ಪ್ರಶಸ್ತಿ ದೊರಕಿರುವುದು ನನ್ನ ಪರಿಶ್ರಮಕ್ಕೆ ಸಂದ ಮತ್ತೊಂದು ಗೌರವ, ಸರೋಜಿನಿ ದಾಮೋದರ ಫೌಂಡೇಶನ್ ಕೊಡಮಾಡುವ ಶಿಷ್ಯವೇತನಕ್ಕೆ ಪ್ರತಿ ವರ್ಷ ನಮ್ಮ ಶಾಲೆಯ ಮಕ್ಕಳು ಆಯ್ಕೆಯಾಗಿ ತಲಾ 24 ರಿಂದ 60 ಸಾವಿರ ಶಿಷ್ಯವೇತನ ಪಡಡೆಯುತ್ತಿರುವುದು ನನ್ನ ಪರಿಶ್ರಮ ಕಾರಣ ಎಂದು ಹೇಳುತ್ತಿದ್ದೇನೆ. ಅಂತೆಯೇ ಎಸ್ಸೆಸೆಲ್ಸಿ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದಲ್ಲಿ ಪ್ರತೀ ವರ್ಷ ಶೇ 100 ಫಲಿತಾಂಶ ಬರುತ್ತಿರುವುದಲ್ಲದೇ, ಶಾಲೆ ಬಿಟ್ಟ ಮಕ್ಕಳ ಮನೆಗೆ ತೆರಳಿ ಶಾಲೆಗೆ ಕರೆತರುವಲ್ಲಿ ಶ್ರಮ ವಹಿಸಿದ್ದು ಎಸ್ಟಿಎಂಸಿ ಪಾಲಕ ಪೋಷಕರ ಮೆಚ್ಚುಗೆಗೆ ಕಾರಣಕರ್ತರಾಗಿದ್ದೇನೆ.

ಪ್ರೌಢಶಿಕ್ಷಣದಲ್ಲಿ ಸಮಾಜ ವಿಜ್ಞಾನ ಎಂದರೆ ಎಲ್ಲರಲ್ಲಿಯೂ ಅಸಡ್ಡೆಯ ಭಾವನೆ ಮತ್ತು ಉದಾಸೀನವೂ ಇದೆ. ಸಮಾಜ ವಿಜ್ಞಾನ ವನ್ನು ಸಾಮಾಜಿಕ
ತಳಹದಿಯಲ್ಲಿ ಭದ್ರಗೊಳಿಸಿ, ಸಾಂವಿಧಾನಿಕ ಮೌಲ್ಯ ಆಶಯಗಳನ್ನು ಈಡೇರಿಸಲು. “ಸಮಾಜ ವಿಜ್ಞಾನಕ್ಕೆ ಅತ್ಯಗತ್ಯವಾಗಿರುವ ಇಂದಿನ ಸನ್ನಿವೇಶದಲ್ಲಿ ಸಮಾಜ ವಿಜ್ಞಾನಕ್ಕೊಂದು ಜೀವಕಳೆ ತುಂಬಿದ್ದೇನೆ ಎಂದೇ ಹೇಳುತ್ತಿದ್ದೇನೆ. ಮಕ್ಕಳಿಗೆ ಸಮಾಜ ವಿಜ್ಞಾನ ಪಠ್ಯ ಸುಲಭವಾಗಿ ಅರ್ಥೈಸಿಕೊಳ್ಳಲು, ಕಾಲಕ್ಕೆ ತಕ್ಕಂತೆ ಆಧುನಿಕ ಕಲಿಕೋಪಕರಣ, ನವೀನ ಬೋಧನಾ ವಿಧಾನ ಗಳನ್ನುನ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೇನೆ ಎಂಟರಿಂದ ಹತ್ತನೇ ತರಗತಿಯವರೆಗೆ “ಸಮಾಜ ವಿಜ್ಞಾನಕ್ಕೆ ಬೇಕಾದ ಪಿಪಿಟಿ, ವಿಡಿಯೊ ಪಾಠ, ಪ್ರಶ್ನೆ ಪತ್ರಿಕೆ ಪಾಸಿಂಗ್ ಪ್ಯಾಕೇಜ್ ಗಳನ್ನು ಸಿದ್ಧಪಡಿಸಿದ್ದು ನನ್ನದೇ ಆದ ಬ್ಲಾಗನ್ನು ಕೂಡ ಹೊಂದಿದ್ದೇನೆ. ಓರ್ವ ಸಮಾಜ ವಿಜ್ಞಾನ ಶಿಕ್ಷಕರಿಗೆ ತನ್ನ ಬೋಧನೆಗೆ ಅಗತ್ಯವಾದ ಎಲ್ಲ ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದೇನೆ.. ನನ್ನ ಸಂಪನ್ಮೂಲ ಎಲ್ಲ ಶಿಕ್ಷಕರಿಗೂ ದೊರೆಯಬೇಕು ಆ ಮೂಲಕ ಪರಿಣಾಮಕಾರಿ ಬೋಧನಾ ಕಲಿಕಾ ಪ್ರಕ್ರಿಯೆ ನಡೆಯಬೇಕು “ಸಮಾಜ ವಿಜ್ಞಾನ ವಿಷಯದಲ್ಲಿ ಸೂಕ್ತವಾಗಿ ತಂತ್ರಜ್ಞಾನದ ಬಳಕೆಯಾಗಬೇಕು ಎಂಬ ಆಶಯ” ಹೊಂದಿದ್ದೇನೆ. ಶಾಸಕರ ದತ್ತು ಶಾಲೆಯಾಗಿ ಆಯ್ಕೆಯಾಗಿರುವುದಲ್ಲೇ ನಮ್ಮ ಗ್ರಾಮೀಣ ಭಾಗದ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲ ಮಾಡಲು” ದಾನಿಗಳ ನೆರವಿನಿಂದ ಪ್ಲಾನಿಟೋರಿಯಂ ನಿರ್ಮಿಸುವ ಹೆಬ್ಬಯಕೆ ಹೊಂದಿದ್ದು ಆ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಿಕ್ಷಣಾಧಿಕಾರಿಗಳು, ಉಪನಿರ್ಧೇಶಕರು, ಡಯಟ್ ಪ್ರಾಂಶುಪಾಲರು ನನ್ನ ಲ್ಯಾಬ್‌ಗೆ ಭೇಟಿ ನೀಡಿ ಪ್ರೋತ್ಸಾಹವನ್ನು ನೀಡುತ್ತಿರುವುದಲ್ಲದೇ ಶಿಕ್ಷಣ ಇಲಾಖೆಯ ಎಲ್ಲ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಿ ಅಧಿಕಾರಿ ವರ್ಗದವರ ಮೆಚ್ಚುಗೆಗೆ ಪಾತ್ರರಾಗಿದ್ದೇನೆ, ಅಂತೆಯೇ ಸ್ಮಾರ್ಟ್ ಕ್ಲಾಸ್ ಬೋಧನೆಯ ಮೂಲಕ ಪರಿಣಾಮಕಾರಿಯಾಗಿಸಿ ಕಲಿಕೆ ಗುಣಮಟ್ಟವನ್ನು ಹೆಚ್ಚಿಸಿರುವುದಲ್ಲದೇ ಕಲಿಕೆಯನ್ನು ಹೆಚ್ಚು ಉಲ್ಲಸಿತವಾಗಿಸಿದ್ದೇನೆ ಎಂದು ಹೇಳುತ್ತಿದ್ದೇನೆ. ಈಮೇಲಿನ ಎಲ್ಲಾ ಅಂಶಗಳನ್ನು ವ್ಯಕ್ತಪಡಿಸುತ್ತಾ ಈ ಸಲದ

‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನನ್ನನ್ನು ಪರಿಗಣಿಸಬೇಕೆಂಬ ಸಮರ್ಥನೆಯನ್ನು ನೀಡುತ್ತಿದ್ದೇನೆ

BIO DATA

ಹೆಸರು:- ಶ್ರೀ ವಿನಾಯಕ ನಾಯ್ಕ

ಸಹ ಶಿಕ್ಷಕರು,ಸರಕಾರಿ ಪ್ರೌಢ ಶಾಲೆ ರೆಂಜಾಳ, ಕಾರ್ಕಳ ತಾಲೂಕು

ವಿದ್ಯಾರ್ಹತೆ:- ಬಿ,ಎ. ಬಿ.ಇಡಿ. ಎಂ,ಎ.( ಅರ್ಥಶಾಸ್ತ್ರ 9 ನೇ ರ್ಯಾಂಕ್)

ಪ್ರಾಥಮಿಕ ಶಾಲಾ ಶಿಕ್ಷಣ; ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅನಂತವಾಡಿ,

ಪ್ರೌಢ ಶಿಕ್ಷಣ,ಪದವಿ ಪೂರ್ವ ಶಿಕ್ಷಣ; ಸರಕಾರಿ ಪ ಪೂ ಕಾಲೇಜು ಮಂಕಿ, ತಾ ಹೊನ್ನಾವರ.

ಪದವಿ ಶಿಕ್ಷಣ;- ಎಸ್,ಡಿ,ಎಂ ಕಾಲೇಜು ಹೊನ್ನಾವರ

ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾ

➤ ;- ಮಾನಸ ಗಂಗೋತ್ರಿ ಮೈಸೂರು

:- 09-03-1980

ಸೇವೆಗೆ ಸೇರಿದ ದಿನಾಂಕ:-19-06-2007.

ದಿನಾಂಕ :-02-05-2012 ರಂದು ವರ್ಷಾ ಇವಳೊಂದಿಗೆ ವೈವಾಹಿಕ ಜೀವನ ಆರಂಭ

ಖಾಯಂ ವಿಳಾಸ;- ತುಂಬೇಬೀಳು, ಗ್ರಾಮ

ಪೋಸ್ಟ;- ಅನಂತವಾಡಿ

ತಾ:- ಹೊನ್ನಾವರ

ಜಿಲ್ಲೆ: ಉತ್ತರಕನ್ನಡ

ತಂದೆಯ ಹೆಸರು:- ಶ್ರೀ ಮಾದವ ಕೆ ನಾಯ್ಕ.- ಕೃಷಿಕ

ತಾಯಿಯ ಹೆಸರು ;-ಶ್ರೀಮತಿ ಮಾಲಾ ಎಂ ನಾಯ್ಕ, ಗೃಹಿಣಿ

ಸೇವೆ ಸಲ್ಲಿಸಿದ ವಿವರಗಳು;

19-08-2007 ರಿಂದ 10-07-2010 ರ ವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಚಂದೂಪುರ ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ.

12-07-2010 ರಿಂದ ಸರಕಾರಿ ಪ್ರೌಢಶಾಲೆ ರೆಂಜಾಳ ಕಾರ್ಕಳ,ಉಡುಪಿ ಜಿಲ್ಲೆ,ಇಲ್ಲಿಯವರೆಗೆ,

ಸೇವಾ ಸಾಧನೆ ವಿವರಗಳು

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸುಮಾರು 70 ” ಎಸ್ ಎಸ್ ಎಲ್ ಸಿ ಫಲಿತಾಂಶ ವೃದ್ಧಿ ಪ್ರೇರಣಾ ತರಬೇತಿ” ನೀಡಿದ ಅನುಭವ.

RMSA STF ರಾಜ್ಯ ಮಟ್ಟದ ತರಬೇತಿಯಲ್ಲಿ MRP ಕಾರ ನಿರ್ವಹಿಸಿದ ಅನುಭವ

“ರಚನಾ ತರಬೇತಿ” ಯಲ್ಲಿ MRP ಯಾಗಿ ಕಾರ್ಯ ನಿರ್ವಹಿಸಿದ ಅನುಭವ

“ರಚನಾ ತರಬೇತಿ” ಜಿಲ್ಲಾ ಹಂತದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ಅನುಭವ

“ಸುಗಮ ತರಬೇತಿ” ಯಲ್ಲಿ MRP ಯಾಗಿ ಕಾರ್ಯ ನಿರ್ವಹಿಸಿದ ಅನುಭವ

“ಸುಗಮ ತರಬೇತಿ” ಜಿಲ್ಲಾ ಹಂತದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ಅನುಭವ

CCE ತರಬೇತಿ ಯಲ್ಲಿ MRP ಯಾಗಿ ಕಾರ ನಿರ್ವಹಿಸಿದ ಅನುಭವ, ಜಿಲ್ಲಾ ಹಂತದಲ್ಲಿ CCE ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ಅನುಭವ.

5 e “ವಿಷಯ ತರಬೇತಿ ಯಲ್ಲಿ MRP ಯಾಗಿ ಕಾರ್ಯ ನಿರ್ವಹಿಸಿದ ಅನುಭವ, ಜಿಲ್ಲಾ ಹಂತದಲ್ಲಿ 5 e

ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ಅನುಭವ,

ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ “ಸಮಾಜ ವಿಜ್ಞಾನ” ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ

ನೀಡಿದ ಅನುಭವ

“ಡಯಟ್ ಉಡುಪಿ” ಇಲ್ಲಿ ಜಿಲ್ಲಾ ಮಟ್ಟದ “ಸಮಾಜ ವಿಜ್ಞಾನ” ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ಅನುಭವ

ತಾಲೂಕು ಸಮಾಜ ವಿಜ್ಞಾನ ” ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ, ರಚನಾ ಕಾರ್ಯಾಗಾರ ದಲ್ಲಿ 7 ಬಾರಿ ಭಾಗವಹಿಸಿದ ಅನುಭವ

ಜಿಲ್ಲಾ ಸಮಾಜ ವಿಜ್ಞಾನ ” ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ, ರಚನಾ ಕಾರ್ಯಾಗಾರ ದಲ್ಲಿ 8 ಬಾರಿ ಭಾಗವಹಿಸಿದ ಅನುಭವ

ವಿಭಾಗ ಮಟ್ಟದ ” ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ, ರಚನಾ ಕಾರ್ಯಾಗಾರ ದಲ್ಲಿ ಭಾಗವಹಿಸಿದ ಅನುಭವ 2 ಬಾರಿ

ರಾಜ್ಯ ಮಟ್ಟದ ” ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ, ರಚನಾ ಕಾರ್ಯಾಗಾರ ದಲ್ಲಿ ಭಾಗವಹಿಸಿದ ಅನುಭವ.

ಕರ್ನಾಟಕ ವಿಜ್ಞಾನ ಪರಿಷದ್” ವಿಜ್ಞಾನ ಅರಿವು ಕಾರ್ಯಕ್ರಮ 2015 ರಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ ಅನುಭವ

“ರಾಜಯೋಗ ಎಜ್ಯುಕೇಶನ್ ಟ್ರಸ್ಟ ವತಿಯಿಂದ ನೀಡಿದ 7 ದಿನದ ಯೋಗ ತರಬೇತಿಯಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ ಅನುಭವ.

ಡಾ.ಬಿ ಆರ್ ಅಂಬೇಡ್ಕರ್ ರವರ 125 ನೇ ಜನ್ಮ ದಿನಾಚರಣೆ ತಾಲೂಕು ಸಮಾರಂಭ ದಲ್ಲಿ “ಮುಖ್ಯ ಭಾಷಣಕಾರರಾಗಿ” ಭಾಗವಹಿಸಿದ ಅನುಭವ.

ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ವಿದ್ಯಾರ್ಥಿಗಳನ್ನು ಪ್ರತಿಭಾ ಕಾರಂಜಿ ಮತ್ತು ರಾಷ್ಟ್ರೀಯ ಪಾತ್ರಾಭಿನಯ, ನಾಟಕ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನೀಡಿದ ಅನುಭವ.

ಜಿಲ್ಲಾ ಸಮಾಜ ವಿಜ್ಞಾನ ವಿಷಯ ವೇದಿಕೆಯ “ಜಿಲ್ಲಾ ಉಪಾದ್ಯಕ್ಷ ರಾಗಿ” ಕಾರ್ಯನಿರ್ವಹಿಸುತ್ತಿರುವುದು,

ಕಳೆದ 7 ವರ್ಷಗಳಿಂದ ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ವಿಷಯದಲ್ಲಿ ಶೇ 95 ರಷ್ಟು ಫಲಿತಾಂಶ ದಾಖಲಾಗಿರುವುದು.

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಕಳೆದ ಏಳು ವರ್ಷಗಳಿಂದ ತಂತ್ರಜ್ಞಾನ”ಬಳಸಿ ಪಾಠ ಬೋಧನೆ.

ಗುರಚೇತನಾ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಟ್ಟದಲ್ಲಿ 5 ದಿನಗಳ 4 ಕಾರ್ಯಾಗಾರ ಮಾಡಿದ ಅನುಭವ

ಟಾಲ್ಪ ಕಂಪ್ಯೂಟರ್ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ 10 ತಂಡಗಳಿಗೆ ಕಂಪ್ಯೂಟರ್ ತರಬೇತಿ ನೀಡಿದ ಅನುಭವ.

ಮಣಿಪಾಲ್ ಪೌಂಡೇಶನ್ ನ ಆನ್ಸೆನ್ ಕ್ಲಾಸ್ ಗೆ ಸಂಪನ್ಮೂಲ ಶಿಕ್ಷಕರಾಗಿ ಪಾಠ ನೀಡುತ್ತಿದ್ದು ಸುಮಾರು 15 ಶಾಲೆಗಳಿಗೆ ಸಮಾಜ ವಿಜ್ಞಾನ ಪಾಠ ಪ್ರಸಾರವಾಗುತ್ತಿದೆ.

ತಾಲೂಕಾ ಮಟ್ಟದ ಮತದಾರ ಸಾಕ್ಷರತಾ ಕ್ಲಬ್* ಸಂಪನ್ಮೂಲ ವ್ಯಕ್ತಿಯಾಗಿತರಬೇತಿ ನೀಡಿದ ಅನುಭವ,

2017-18 ನೇ ಸಾಲಿನ ಸಾ,ಶಿಕ್ಷಣ ಇಲಾಖೆ ಕಾರ್ಕಳ ದಿಂದ “ ತಾಲೂಕು ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿ “ದೊರತಿರುವುದು

ಸರಕಾರಿ ಪ್ರೌಢಶಾಲೆ ರೆಂಜಾಳ ಇಲ್ಲಿ ದಾನಿಗಳ ನೆರವಿನಿಂದ ಸುಮಾರು 5 ಲಕ್ಷ ರೂ, ವೆಚ್ಚದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸಮಾಜ ವಿಜ್ಞಾನ ಡಿಜಿಟಲ್ ಲ್ಯಾಪ್” ನಿರ್ಮಿಸಿದ ಹೆಗ್ಗಳಿಕೆ.

ಧನ್ಯವಾದಗಳು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top