ರುದ್ರಭೂಮಿಯಲ್ಲೊಬ್ಬ ಸಮಾಜ ಸೇವಕ ಪ್ರಕಾಶ್ ರಾವ್ : ಮಿಯ್ಯಾರು ಕಥೋಲಿಕ್ ಸಭಾ ಘಟಕದಿಂದ ಅಭಿನಂದನೆ
ಕಾರ್ಕಳ : ರುದ್ರಭೂಮಿಯಲ್ಲಿ ಹಗಲು-ಇರುಳು ಎನ್ನದೇ ಸ್ಪಂದಿಸಿ,ದಹನ ಮತ್ತು ದಪನ ಕಾರ್ಯದ ಸೇವೆ ಮಾಡುತ್ತಿರುವ ರುದ್ರಭೂಮಿಯ ವ್ಯವಸ್ಥಾಪನ ಸಮಿತಿಯ ಸಂಚಾಲಕರ, ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ರವರಿಗೆ ಮಿಯ್ಯಾರು ಚರ್ಚ್ ನ ಧರ್ಮ ಗುರು ಯೂನಿಟ್ ಬರ್ಬೋಜಾ ಅಭಿನಂದಿಸಿದರು.ಮಿಯ್ಯಾರು ಕಥೋಲಿಕ್ ಸಭಾ ಘಟಕದ ಆಶ್ರಯದಲ್ಲಿ ಮಿಯ್ಯಾರು ಚರ್ಚ್ ಆವರಣದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಮಾಜ ಸೇವೆಗೈಯುತ್ತಿರುವವರನ್ನು ಗುರುತಿಸಿ ಸನ್ಮಾನಿಸಲಾಗಿದೆ
ಕಾರ್ಕಳ ಕರಿಯಕಲ್ಲು ಹಿಂದೂ ರುದ್ರಭೂಮಿಯನ್ನು ಪುರಸಭೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿಯನ್ನು ಪಡಿಸುತ್ತಾ ಕೋರೊನ ಸಂದರ್ಭದಲ್ಲಿ ಮೃತದೇಹಗಳನ್ನುಪ್ರಕಾಶ್ ರಾವ್ ದಹನಗೈಯುತ್ತಿದ್ದರು.
ಈ ಸಂದರ್ಭದಲ್ಲಿ ನಿವೃತ್ತಿ ಸೈನಿಕರಾದ ಹವಾಲ್ದಾರ್ ರಾಜೇಶ್ ಶೆಟ್ಟಿಗಾರ್ ,ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರು,ಕಾರ್ಯದರ್ಶಿ,20 ಆಯೋಗದ ಸದಸ್ಯರು ಹಾಗೂ ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.




































