ರುಡ್ ಸೆಟ್ ಸಂಸ್ಥೆ :ಜೇನು ಕೃಷಿ,ರಬ್ಬರ್ ಟ್ಯಾಪಿಂಗ್ ತರಬೇತಿ
ಉಜಿರೆ: ರುಡ್ ಸೆಟ್ ಸಂಸ್ಥೆ, ಉಜಿರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರಬೇತಿಯನ್ನು ಆಯೋಜಿಸಿದೆ.
ಜೇನು ಕೃಷಿಯ ಕುರಿತು ನವಂಬರ್ 11 ರಿಂದ 20ವರೆಗೆ (10ದಿನ) ಮತ್ತು ರಬ್ಬರ್ ಟ್ಯಾಪಿಂಗ್ ನವಂಬರ್ 19 ರಿಂದ 28 (10ದಿನ) ರ ತನಕ ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಾಯಂಕಾಲ 5.30ರವರೆಗೆ ತರಬೇತಿ ನಡೆಯುತ್ತದೆ.
ಪ್ರತಿ ದಿನ ಮನೆಗೆ ಹೋಗಿ ಬರಲು ಅವಕಾಶವಿರುತ್ತದೆ. ವಸತಿ, ಊಟ, ತರಬೇತಿ ಉಚಿತವಾಗಿದ್ದು, 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ.
ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7


ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 6364561982 ಹಾಗೂ
https://rudsetujire.com
ಸಂಸ್ಥೆಯ ವೆಬ್ ಸೈಟ್ನ್ನು ಸಂಪರ್ಕಿಸಿ.
ಸ್ಥಳ: ರುಡ್ ಸೆಟ್ ಸಂಸ್ಥೆ, ಉಜಿರೆ, ಧರ್ಮಸ್ಥಳ,
ದಕ್ಷಿಣ ಕನ್ನಡ
ಜಿಲ್ಲೆ














