ರಿತನ್ಯ ಎಸ್. ಆಚಾರ್ಯ ಗೆ “ಸೂಪರ್ ಟ್ಯಾಲೆಂಟೆಡ್ ಕಿಡ್” ಬಿರುದು

Picture of RB NEWS

RB NEWS

Bureau Report

ಉಡುಪಿ : ಕಮಲಶಿಲೆಯ ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “ಸೂಪರ್ ಟ್ಯಾಲೆಂಟೆಡ್ ಕಿಡ್” ಎಂಬ ಬಿರುದನ್ನು ಪಡೆದು “ಒನ್ ಇನ್ ಎ ಮಿಲಿಯನ್” ಗೌರವವನ್ನು ಪಡೆದಿದ್ದಾಳೆ.

ರಿತನ್ಯ 21 ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 20 ಹಣ್ಣುಗಳು, 10 ಜಲಚರ ಪ್ರಾಣಿಗಳು, 6 ಕೀಟಗಳು, 23 ತರಕಾರಿಗಳು, 65 ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ತೋರಿದಷ್ಟೇ ಅಲ್ಲದೆ, 30 ವಸ್ತುಗಳನ್ನು ಹುಡುಕಿ ತರುವುದು, ಹೇಳಿದ ಆಜ್ಞೆಗಳನ್ನು ಪಾಲಿಸಿ ಮಾಡುವುದು, 8 ಕ್ಕೂ ಹೆಚ್ಚು ಸಾಕುಪ್ರಾಣಿಗಳ ಧ್ವನಿಯನ್ನು ಅನುಕರಿಸುವುದು ಮತ್ತು ಕೇವಲ 2 ನಿಮಿಷ 40 ಸೆಕೆಂಡ್‌ಗಳಲ್ಲಿ 35 ಮೆಟ್ಟಿಲುಗಳನ್ನು ಸಹಾಯವಿಲ್ಲದೆ ಏರಿರುವ ಮೂಲಕ ತನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.

ತಂದೆ ಸುಧಾಕರ ಆಚಾರ್ಯ ಹಾಗೂ ತಾಯಿ ಸುಚೇತಾ ಅವರು ಮಗಳಲ್ಲಿನ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗಮನಿಸಿ ಪ್ರೋತ್ಸಾಹ ನೀಡಿದ್ದು, ಕುಟುಂಬದವರು ರಿತನ್ಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top