ರಿಕ್ಷಾ ವಶಪಡಿಸಿದ ಪೊಲೀಸರು ಮನ ನೊಂದ ಚಾಲಕ ಆತ್ಮಹತ್ಯೆ
ಕಾಸರಗೋಡು : ತಾನು ಓಡಿಸುತ್ತಿದ್ದ ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನಲೆಯಲ್ಲಿ ಮನ ನೊಂದು ಚಾಲಕ ವಾಸ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ನಗರದಲ್ಲಿ ನಡೆದಿದೆ.

ಕರ್ನಾಟಕದ ಅಬ್ದುಲ್ ಸತ್ತಾರ್ ( 55) ಮೃತಪಟ್ಟವರು ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಬಾಡಿಗೆ ಕ್ವಾಟರ್ಸ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದ್ದಾರೆ .
ಮೂರು ವರ್ಷಗಳಿಂದ ಕ್ವಾಟರ್ಸ್ ನಲ್ಲಿ ವಾಸ್ತವ್ಯ ಹೂಡಿ ನಗರದಲ್ಲಿ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಸಂಜೆ ನಗರದ ಗೀತಾ ಜಂಕ್ಷನ್ ಬಳಿ ಅಬ್ದುಲ್ ಸತ್ತಾರ್ ರವರ ಆಟೋರಿಕ್ಷಾ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ನಿಲುಗಡೆ ಗೊಳಿಸಲಾಗಿದೆ ಎಂದು ಆರೋಪಿಸಿ ನೋಟಿಸ್ ನೀಡಿ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಸಾಲ ಪಡೆದು ಆಟೋರಿಕ್ಷಾ ಖರೀದಿಸಿದ್ದು , ಬಿಟ್ಟುಕೊಡುವಂತೆ ಹಲವು ಬಾರಿ ಠಾಣೆಗೆ ತೆರಳಿ ಪೊಲೀಸರಲ್ಲಿ ಮನವಿ ಮಾಡಿದರೂ ಪೊಲೀಸರು ಬಿಟ್ಟುಕೊಡಲು ಮುಂದಾಗಲಿಲ್ಲ ಎನ್ನಲಾಗಿದೆ. ಬಳಿಕ ಉಳಿದ ಆಟೋ ರಿಕ್ಷಾ ಚಾಲಕರು ಕಾಸರಗೋಡು ಡಿ ವೈ ಎಸ್ಪಿ ಕಚೇರಿಗೆ ತೆರಳಿ ಮನವಿ ಮಾಡಿದ್ದು , ಭರವಸೆ ನೀಡಿದ್ದರೂ ನಗರ ಠಾಣಾ ಪೊಲೀಸರು ಹಲವು ಕಾರಣ ನೀಡಿ ಆಟೋ ರಿಕ್ಷಾ ಬಿಟ್ಟು ಕೊಡಲು ಮುಂದಾಗಲಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ. ಈ ನಡುವೆ ಸೋಮವಾರ ಸಂಜೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಘಟನೆ ಬಳಿಕ ನಗರದಲ್ಲಿ ಆಟೋ ಚಾಲಕರು ಸಂಚಾರ ಸ್ಥಗಿತ ಗೊಳಿಸಿ ಮುಷ್ಕರ ನಡೆಸಿದರು. ಆಟೋ ಚಾಲಕರು ನಗರ ಠಾಣೆಗೆ ಮುತ್ತಿಗೆ ಹಾಕಿದರು.
ಸಬ್ ಇನ್ಸ್ ಪೆಕ್ಟರ್ ಪಿ . ಅನೂಪ್ ವರ್ಗಾವಣೆ

ಇನ್ನು ಆಟೋರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ನ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಕ್ಕೆ ಸಿಲುಕಿರುವ ಕಾಸರಗೋಡು ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಪಿ . ಅನೂಪ್ ರನ್ನು ಚಂದೇರ ಪೊಲೀಸ್ ಠಾಣೆ ಗೆ ವರ್ಗಾಹಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ರವರು ಅನೂಪ್ ರವರನ್ನು ಕಚೇರಿಗೆ ಕರೆಸಿ ವರ್ಗಾವಣೆ ಆದೇಶವನ್ನು ನೀಡಿದ್ದಾರೆ ಅನೂಪ್ ರವರ ವಿರುದ್ದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ಆತ್ಮಹತ್ಯೆಗೂ ಮುನ್ನಾ ಸ್ವಯಂ ವಿಡಿಯೋ ಚಿತ್ರೀಕರಣ…
ಅಬ್ದುಲ್ ಸತ್ತಾರ್ ಆತ್ಮಹತ್ಯೆ ಮಾಡುವ ಮುನ್ನ ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ.
ಕಾಸರಗೋಡು ಮೂಲದ ಅಬ್ದುಲ್ ಸತ್ತಾರ್ ಮಂಗಳೂರು ಮಹಿಳೆಯೊಂದಿಗೆ ವಿವಾಹವಾಗಿದ್ದರು. ಆ ನಂತರದಲ್ಲಿ ವಾರಕ್ಕೊಮ್ಮೆ ಮಂಗಳೂರು ಮನೆಗೆ ಹೋಗುತ್ತಿದ್ದರು. ರಿಕ್ಷಾದಲ್ಲಿ ದುಡಿದು ಸಂಪಾದಿಸುತ್ತಿದ್ದ ಸಂಪಾದನೆಯನ್ನು ಮನೆಯ, ರಿಕ್ಷಾದ ಲೋಡಿಗೆ, ಸ್ವಂತ ಜೀವನಕ್ಕೂ ವಿನಿಯೋಗಿಸುತ್ತಿದ್ದರು.
ರಿಕ್ಷಾವನ್ನು ಪೊಲೀಸರು ವಶ ಪಡಿಸಿದ ಬಳಿಕ ಅದರ ಬಿಡುಗಾಗಿ ಜಿಲ್ಲಾ ಪೊಲೀಸ್ ಕಚೇರಿ, ಡಿವೈಎಫ್ಪಿ ಕಚೇರಿ, ನಗರ ಠಾಣೆ ಅಂತ ಅಲೆದಾಡ ಬೇಕಾಯಿತು.
ಈ ನಡುವೆ ಆರ್ಥಿಕ ಕ್ರೋಡೀಕರಣದಲ್ಲಿ ಏರುಪೇರಾಯಿತು.
ಮತ್ತೊಂದೆಡೆ ಹೃದ್ರೋಗ ಹಾಗೂ ದೇಹ ಇತರ ಸಮಸ್ಸೆಯಿಂದ ಅವರ ಮಾನಸೀಕ ನೆಮ್ಮದಿಗೂ ಭಂಗವಾಗಿದೆ ಎಂಬ ಇನ್ನಷ್ಟು ವಿವರಯುಳ್ಳ ಮಾಹಿತಿ ಆ ವಿಡಿಯೋ ಚಿತ್ರೀಕರಣದಲ್ಲಿ ದಾಖಲಾಗಿದೆ.




































