ರಾ.ಹೆ 169 : ಮುರತಂಗಡಿ ಡೈ ವರ್ಷನ್ ಕಬ್ಬಿಣದ ಗ್ರಿಲ್ಲಿಗೆ ರಿಕ್ಷಾ ಡಿಕ್ಕಿ : ಚಾಲಕ ಗಂಭೀರ
ಕಾರ್ಕಳ : ರಾ.ಹೆ 169 ಮುರತಂಗಡಿ ಪರಿಸರದ ಶ್ರೀ ಬಾಲಾಂಜನೇಯ ಯುವಕ ಸಂಘದ ಆಟದ ಮೈದಾನದ ಎದುರು ಅಕ್ಟೋಬರ್ 31 ಶುಕ್ರವಾರ ಮುಸ್ಸಂಜೆ ಸುಮಾರು 6:45 ರ ಹೊತ್ತಿಗೆ ರಸ್ತೆ ವಿಭಾಜಕದ ಕಬ್ಬಿಣದ ಗ್ರಿಲ್ಲಿಗೆ ಮೂಡಬಿದ್ರೆಯಿಂದ ಬರುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದು ಚಾಲಕ ಗಂಭೀರವಾಗಿ ಗಾಯಗೊಂಡಿರುತ್ತಾರೆ.









































