ರಾಹೆ -169 : ಮುರಿದ ಕಾಂಕ್ರೀಟ್ ಸ್ಲಾಬ್
ಕಾರ್ಕಳ : ರಾಷ್ಟ್ರೀಯ ಹೆದ್ದಾರಿ – 169 ಸಾಣೂರಿನ ಪದ್ಮನಾಭನಗರ ಗುಡ್ಡದ ಬಳಿಯಿಂದ ಮುದ್ದಣ್ಣ ನಗರಕ್ಕೆ ಹೋಗುವ ಸಂಪರ್ಕ ಅಳವಡಿಸಲಾಗಿದ್ದ ಸ್ಲಾಬ್ ಮುರಿದು ಬಿದ್ದಿದೆ.

ಸಾರ್ವಜನಿಕರ ತೊಂದರೆಗೆ ಕೂಡಲೇ ಸ್ಪಂದಿಸಿದ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆ ತುರ್ತು ದುರಸ್ಥಿ ಕಾಮಗಾರಿ ನಡೆಸಿ, ಕೇವಲ ಮೂರು ನಾಲ್ಕು ಗಂಟೆಯ ಒಳಗೆ ಸಂಪರ್ಕ ಕಡಿತಗೊಂಡಿದ್ದ ರಸ್ತೆಯ ಪಕ್ಕದಲ್ಲಿಯೇ ಬದಲಿ ರಸ್ತೆ ಕೂಡಲೇ ಸರಿಪಡಿಸಿ ಸುವ್ಯವಸ್ಥಿತಗೊಳಿಸಿ ಜನರ ಮತ್ತು ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ.







































