ರಾಹೆ-169 :ಡಿಬಿಎಲ್ ಟಿಪ್ಪರ್ ಪಲ್ಟಿ

Picture of RB NEWS

RB NEWS

Bureau Report

ಕಾರ್ಕಳ : ರಾಷ್ಟ್ರೀಯ ಹೆದ್ದಾರಿ-169ರ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರತಂಗಡಿಯಲ್ಲಿ ಟಿಪ್ಪರ್ ವೊಂದು ಪಲ್ಟಿ ಹೊಡೆದ ಘಟನೆ ಸೋಮವಾರ ಮಧ್ಯಾಹ್ನ ವೇಳೆಗೆ ಸಂಭವಿಸಿದೆ.

ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಎದುರುಗಡೆ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ದಿನ ( ಫೆಬ್ರವರಿ 24 ಸೋಮವಾರ) ಅಪರಾಹ್ನ ಸುಮಾರು 12 ಗಂಟೆ ವೇಳೆಗೆ ಮಣ್ಣು ತುಂಬಿದ ಟಿಪ್ಪರ್ ಹೆದ್ದಾರಿ ಕಡೆಗೆ ಹೋಗುತ್ತಿದ್ದ ವೇಳೆಗೆ ಈ ಘಟನೆ ಸಂಭವಿಸಿದೆ.

ಚಾಲಕನೊರ್ವನೇ ಟಿಪ್ಪರ್ ನಲ್ಲಿದ್ದು ಚಾಲಕನ ಬದಿಗೆ ಟಿಪ್ಪರ್ ನೆಲಕ್ಕುರುಳಿತು.

ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಹೆಚ್ಚಿನ ಗಾಯಗಳಿಲ್ಲದೆ, ಟಿಪ್ಪರ್ ಜಖಂ ಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯಿಂದ ಸರ್ವಿಸ್ ರಸ್ತೆಯ ಅಂಚಿನಲ್ಲಿ ಮಳೆ ನೀರು ಹೋಗಲು ನಿರ್ಮಾಣಗೊಂಡ ಕಾಂಕ್ರೀಟ್ ಮೋರಿಯ ಮೇಲೆ ಮಣ್ಣು ತುಂಬಿಸಿಕೊಂಡು ಬಂದ ಟಿಪ್ಪರ್ ಹತ್ತಿ ಬಂದದ್ದೇ ಈ ದುರ್ಘಟನೆಗೆ ಕಾರಣವಾಗಿದೆ.

ಲಾರಿ ಚಲಾಯಿಸಲು ಪಕ್ಕದಲ್ಲಿಯೇ ಸಾಕಷ್ಟು ಸ್ಥಳಾವಕಾಶ ಇದ್ದರು ಲಾರಿಯನ್ನು ಕಾಂಕ್ರೀಟ್ ಮೋರಿಯ ಮೇಲೆ ಚಲಾಯಿಸಿದ ಚಾಲಕನನ್ನು ಡಿಬಿಎಲ್ ಕನ್ ಸ್ಟ್ರಕ್ಚರ್ ಮ್ಯಾನೇಜರ್ ಬಾಲಾಜಿ ತೀವ್ರ ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ಪರಿಸರದ ನಿವಾಸಿಗಳ ಸಹಕಾರದಿಂದ ಸ್ಥಳದಲ್ಲಿಯೇ ಲಭ್ಯವಿದ್ದ ಹಿಟಾಚಿ ಮತ್ತು ಲೆವೆಲ್ಲರ್ ಯಂತ್ರದ ಮೂಲಕ ಅಡ್ಡಬಿದ್ದ ಲಾರಿಯನ್ನು ಮೇಲಕ್ಕೆತ್ತಿ ಸರಿಪಡಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top