ರಾಷ್ಟ್ರ ನಾಯಕರು ಯುವಕರಿಗೆ ಮಾರ್ಗದರ್ಶನಕ್ಕೆ ಯುಕ್ತ -ಅಭಯಚಂದ್ರ ಜೈನ್

Picture of RB NEWS

RB NEWS

Bureau Report

ಮೂಡುಬಿದಿರೆ: ರಾಷ್ಟ್ರಪ್ರೇಮದ ದ್ಯೋತಕವಾಗಿ ವಿದ್ಯಾಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರನ್ನಿಟ್ಟು ರಾಷ್ಟ್ರಪ್ರೇಮ ಪ್ರದರ್ಶಿಸುವ ಅಗತ್ಯವಿದೆ ಎಂದು ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಅಧ್ಯಕ್ಷ, ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ಬಿ. ಆರ್.ಪಿ. ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣದ ಜೊತೆಗೆ ಆಟ, ನಾಟಕ ಎಲ್ಲವೂ ವಿದ್ಯಾರ್ಥಿಗಳ ಪ್ರತಿಭೆ ಹೆಚ್ಚಿಸಲು ಪೂರಕವಾಗಿರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜಿನ ಅಧ್ಯಕ್ಷ ಚಂದ್ರಶೇಕಜರ ರಾಜೆ ಅರಸ್ ಅವರು ಮಾತನಾಡಿ ಹಿಂದೆ ಹೆತ್ತವರು ಮತ್ತು ಗುರುಕುಲ ವ್ಯವಸ್ಥೆಯಲ್ಲಿ ಮಕ್ಕಳು ಬದುಕಿನ ವಿದ್ಯೆ ಕಲಿಯುತ್ತಿದ್ದರು.

ಇಂದು ಶಾಲಾ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಆರಿತು ಸರಕಾರ ಈ ವ್ಯವಸ್ಥೆಯನ್ನು ಜಾರಿಗೆ ತಂದಿತು. ಸಾಮಾನ್ಯ ಜ್ಞಾನವೂ ಅಂಕಗಳಷ್ಟೆ ಮುಖ್ಯ ಎಂಬುದನು ವಿದ್ಯಾರ್ಥಿಗಳು ಅರಿತುಕೊಳ್ಳ ಬೇಕಾಗಿದೆ ಎಂದರು.

ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮೂಡುಬಿದಿರೆ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ.. ನಿವೃತ್ತಿಯ ಸನ್ಮಾನ ಪಡೆದ ದೈಹಿಕ ಶಿಕ್ಷಣ ಅಧ್ಯಾಪಕ ಕ್ಲೆಮೆಂಟ್ ಡಿಸೋಜ ಶುಭ ಹಾರೈಸಿದರು. ಶಾಲಾ ‌ಸಂಚಾಲಕ ರಾಮನಾಥ್ ಭಟ್, ಉಪಾಧ್ಯಕ್ಷರುಗಳಾದ ಪುಷ್ಪರಾಜ್ ಜೈನ್, ಪಿ. ರಾಮಪ್ರಸಾದ್ ಭಟ್, ಕೋಶಾಧಿಕಾರಿ ದಾಮೋದರ್, ಶಿಕ್ಷಕರ ಸಂಘದ ರಾಮಕೃಷ್ಣ ಶಿರೂರು , ಶಾಲಾ ಮುಖ್ಯೋಪಾಧ್ಯಾಯಿನಿ ತೆರೇಸಾ ಕರ್ಡೋಜಾ. ನಿವೃತ ಮುಖ್ಯೋಪಾಧ್ಯಾಯಿನಿ ಪದ್ಮಜಾ ಕೆ.. ಮನೋಜ್ ಕುಮಾ‌ರ್ ಶೆಟ್ಟಿ, ವೆಂಕಟೇಶ್ ಕಾಮತ್, ನ್ಯಾಯವಾದಿ ಮನೋಜ್ ಶೆಣೈ, ಹಳೆ ವಿದ್ಯಾರ್ಥಿಗಳಾದ ದಿನೇಶ್ ಕಾಮತ್, ಸಚಿನ್ ಆಚಾರ್ಯ ಬಹುವಮಾನ ವಿತರಿಸಿದರು. ವಿದ್ಯಾರ್ಥಿ ನಾಯಕ ಆಕಾಶ್
ಉಪಸ್ಥಿತರಿದ್ದರು.

ಶಾಲೆಗೆ ನಿರಂತರ ಸಹಕಾರ ನೀಡುತ್ತಿರುವ ಅಮೀನಾ, ರಾಘವೇಂದ್ರ ಶೆಟ್ಟಿ, ರಂಜನ್, ಯಜೇಶ್, ಕ್ರಿಸ್ಟಿನ್, ಗಣೇಶ್ ಪೈ. ಹರೀಶ್. ರಶ್ಮಿತಾ ಪ್ರಸಾದ್ ಶೆಟ್ಟಿ, ವಾಣಿಶ್ರೀ ಕಾಂತಾವರ ಅವರನ್ನು ಗೌರವಿಸಲಾಯಿತು.

ಅತ್ಯುತ್ತಮ ವಿದ್ಯಾರ್ಥಿಗಳಾದ ಆಕರ್ಶ್ ಮತ್ತು ಹೇಮಾ ಅವರನ್ನು ಅಭಿನಂದಿಸಲಾಯಿತು.

ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಭಾಗೀರತಿ, ಅನುಶ್ ಆಚಾರ್ಯ ಮೇಘಾ, ಜೈನಾಬ್, ಅಂಕಿತಾ, ಕಿಶನ್ ಮತ್ತು ಸೋಮೇಶ್ ಅವರಲ್ಲದೆ ಪ್ರಸಕ್ತ ಸಾಲಿನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ವಿದ್ಯಾರ್ಥಿಗಳನ್ನು ನಗದು ಬಹುಮಾನದೊಂದಿಗೆ ಪುರಸ್ಕರಿಸ ಲಾಯಿತು.

ಮೇಬಲ್ ಮೆಂಡೋನ್ಸಾ, ಪ್ರತಿಮಾ ಮತ್ತು ಭರತ್‌ ನಾಯ್ಕ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಶಂಕರ ಭಟ್ ಬಹುಮಾನಿತರ ಪಟ್ಟಿ ವಾಚಿಸಿದರು.

ವೆಂಕಟರಮಣ ಕೆರೆಗದ್ದೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಿರಣ್ ಕುಮಾರ್ ವಂದಿಸಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top