ರಾಷ್ಟ್ರೀಯ ಹೆದ್ದಾರಿ -169 ಅಭಿವೃದ್ಧಿಯ ನೆಪದಲ್ಲಿ ಗಣಿಗಾರಿಕೆ:ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಜಾಣ ನಡೆ

Picture of RB NEWS

RB NEWS

Bureau Report

ಮೂಡುಬಿದಿರೆ: ಮೂಡುಬಿದಿರೆ- ಮಂಗಳೂರು ನಡುವೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನ ಎಡಪದವು, ಪುತ್ತಿಗೆ, ಆಡೂರು ಮೊದಲಾದೆಡೆಗಳಲ್ಲಿ ಡಿಬಿಎಲ್ ಕಂಪನಿಯ ಕೆಲವು ಸಿಬ್ಬಂದಿ ಕೆಂಪು ಕಲ್ಲುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ.

ರಸ್ತೆ ಅಭಿವೃದ್ದಿಯ ನೆಪದಲ್ಲಿ ಕೃಷಿ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಸ್ವಾದೀನಪಡಿಸಿ NHAI ಮತ್ತು DBL ನವರು ರಸ್ತೆಯಲ್ಲದೆ ವಿನೂತನ ಲಾಭದಾಯಕ ವ್ಯಾಪಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ಆಶ್ಚರ್ಯ ತಂದಿದೆ.

ಕೃಷಿ ಭೂಮಾಲಕರಿಗೆ ಪರಿಹಾರ ನೀಡಲು ಸತಾಯಿಸಿ NHAI ಮತ್ತು DBL ರಸ್ತೆ ವಿಸ್ತರಣೆಯ ನೆಪದಲ್ಲಿ ಚತುರ ವ್ಯಾಪಾರವನ್ನೂ ಆವಿಷ್ಕರಿಸುತ್ತಿವೆ.

ರಸ್ತೆ ನಿರ್ಮಿಸುವ ಬದಲು ಕಲ್ಲುಗಳನ್ನು ಅಗೆದು ಮಣ್ಣು ತುಂಬಿ ಅದರ ಮೇಲೆ ರಸ್ತೆ ನಿರ್ಮಿಸಲು ಎನ್ ಎಚ್ ಎಐ ಹಾಗೂ ರಸ್ತೆ ನಿರ್ಮಾಣ ಸಂಸ್ಥೆ ಡಿ ಬಿ ಎಲ್ .ಮುಂದಾಗಿದೆ.

ಅಭಿವೃದ್ಧಿಯ ನೆಪದಲ್ಲಿ ನಡೆಯುತ್ತಿರುವ ವ್ಯಾಪಾರದ ಬಗ್ಗೆ ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಯಾಕೆ ಮೌನವಾಗಿದೆ ಎಂಬುವುದು ಯಕ್ಷಪ್ರಶ್ನೆಯಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top