ರಾಷ್ಟ್ರೀಯ ಹೆದ್ದಾರಿ -169 ಬಳಿ ಅಪರಿಚಿತ ಶವ ಪತ್ತೆ
ಮೂಡುಬಿದಿರೆ: ಮಂಗಳೂರು- ಮೂಡುಬಿದಿರೆ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169ರ ತೋಡಾರ್ ಜಂಕ್ಷನ್ ಬಳಿ ಮದ್ಯವಯಸ್ಕರೊಬ್ಬರ ಮೃತ ದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.




ಸುಮಾರು 45 ವಯಸ್ಸಿನ ಗಂಡಸ್ಸಿನ ಮೃತ ದೇಹ ಅದಾಗಿದ್ದು, ಉಸಿರು ನಿಲ್ಲುವ ಕೊನೆ ಕ್ಷಣದಲ್ಲಿ ಚಡಪಡಿಸಿದ ರೀತಿಯಲ್ಲಿ ಕೈಗಳು ಮೇಲಕ್ಕೇತ್ತಿದ ರೀತಿಯಲ್ಲಿ ಕಂಡು ಬಂದಿದೆ.
ಅಪರಿಚಿತ ವ್ಯಕ್ತಿಯಾಗಿದ್ದು, ಸಾವಿನ ಕುರಿತು ಮೂಡುಬಿದಿರೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ
ಮೂಡುಬಿದಿರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.





































