ರಾಷ್ಟ್ರೀಯ ಹೆದ್ದಾರಿ -169: ಪರಿಹಾರ ವಿತರಣೆಯಲ್ಲಿ ತಾರತಮ್ಯ ಗ್ರಾಮಸ್ಥರ ಅಳಲು

Picture of RB NEWS

RB NEWS

Bureau Report

ಕಾರ್ಕಳ : ರಾಷ್ಟ್ರೀಯ ಹೆದ್ದಾರಿ- 169 ಸಾಣೂರು ಪುಲ್ಕೇರಿ ಬೈಪಾಸ್ ಜಂಕ್ಷನ್ ನಿಂದ ಮಾಳ ಅರಣ್ಯ ಗೇಟ್ ರವರೆಗೆ 15 ಕಿ.ಮೀ ವ್ಯಾಪ್ತಿಯ ಭೂಮಾಲಕರಿಗೆ ಪರಿಹಾರ ಕಾರ್ಯ ವಿತರಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಾರತಮ್ಯ ಧೋರಣೆ ಅನುಸರಿಸಿದೆ ಎಂದು ರಾಷ್ಟ್ರೀಯ ಹೆದ್ದಾರಿ 169_ಭೂ ಮಾಲಕರ ಹೋರಾಟ ಸಮಿತಿಯ ಪ್ರಮುಖ ಸಾಣೂರು ಜಾನ್ ಡಿ:ಸಿಲ್ವ ಆರೋಪಿಸಿದ್ದಾರೆ.

ನಗರದ ಹೋಟೆಲ್ ಪ್ರಕಾಶ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತಮಾಡಿದರು.

ಜಿಲ್ಲಾಧಿಕಾರಿಯವರ ಇತ್ತೀಚೆಗೆ ಹೇಳಿಕೆಯೊಂದನ್ನು ಹೊರಡಿಸಿ ಎಲ್ಲಾ ಭೂಮಾಲಕರು ಪರಿಹಾರ ಮೊತ್ತವನ್ನು ಪಡೆಯಲು ಸಹಮತ ವ್ಯಕ್ತಪಡಿಸಿರುತ್ತಾರೆ ಎಂದಿದ್ದರು. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಭೂಮಾಲಕರಿಗೆ ಪರಿಹಾರ ಮೊತ್ತವನ್ನು ಸಮರ್ಪಕವಾಗಿ ವಿತರಿಸುವಲ್ಲಿ ವಿಫಲವಾಗಿದೆ. ಸರಕಾರ ದರಕ್ಕಿಂತ ಕಡಿಮೆ ದರದಲ್ಲಿ ಪರಿಹಾರ ವಿತರಿಸುವಲ್ಲಿ ಮುಂದಾಗುತ್ತಿದೆ. ಅದು ಒತ್ತಾಯ ಪೂರಕವಾಗಿದೆ. ಇದು ಸರಿಯಾದ ಕ್ರಮವೂ ಅಲ್ಲ. ರಾಷ್ಟ್ರೀಯ ಹೆದ್ದಾರಿ-169 ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಆಕ್ಷೇಪವಿಲ್ಲ ಎಂದರು.

ರಾಷ್ಟ್ರೀಯ ಹೆದ್ದಾರಿ 169 ಸಾಣೂರು, ಮಿಯಾರು, ಮುಡಾರು, ಮಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಹುತೇಕ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಇನ್ನೂ ಕೂಡ ಭೂಮಾಲಕರಿಗೆ ನ್ಯಾಯಯುತ ಪರಿಹಾರ ದೊರಕಿರುವುದಿಲ್ಲ.

ರಾಷ್ಟ್ರೀಯ ಹೆದ್ದಾರಿ- 169 ಅಭಿವೃದ್ಧಿ ಕಾರ್ಯದ ವೇಳೆಗೆ ಜಮೀನಿನಲ್ಲಿ ಇರುವ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅತಿ ಕನಿಷ್ಠ ಬೆಲೆಯನ್ನು ನಿರ್ಧರಿಸಲಾಗಿದೆ.

ತೆಂಗು, ಅಡಿಕೆ,( ತೆಂಗಿನ ಮರದ ಜೀವಿತ ಅವಧಿ ಸರಾಸರಿ 60 ರಿಂದ 75 ವರ್ಷವಾಗಿದ್ದು ವರ್ಷಕ್ಕೆ ಕನಿಷ್ಠ 3,000 ರೂಪಾಯಿ ಆದಾಯ ಕೊಡುತಿದೆ ಒಂದು ಲಕ್ಷದವರೆಗೆ, ಬರುತ್ತಿರುವ ತೆಂಗಿನ ಮರಕ್ಕೆ ಕೇವಲ 13,000 ಬೆಲೆಯನ್ನು ನಿರ್ಧರಿಸಿದ್ದಾರೆ.

ಕೃಷಿ ಭೂಮಿಗೆ ಮೌಲ್ಯ ನಿಗದಿ ಮಾಡುವಾಗ ಎನ್ ಹೆಚ್ (national High way) ನಿಯಮ ಪಾಲಿಸದೆ ಇರುವುದು ಕಂಡು ಬಂದಿದೆ. ಹೆದ್ದಾರಿ ಬದಿಯಲ್ಲಿರುವ ಕೆಲವು ಜಮೀನುಗಳಿಗೆ ಇನ್ನೂ ಭೂಸ್ವಾಧೀನಕ್ಕೆ ಅಧಿಸೂಚನೆಯನ್ನೇ ಹೊರಡಿಸಿಲ್ಲ.

ಸಾಣೂರಿನಿಂದ ಕುಲಶೇಖರದ ವರೆಗೆ ಪರಿಹಾರ ಮೊತ್ತವನ್ನು ನಿರ್ಧರಿಸಲು ಅನುಸರಿಸಿದ ನಿಯಮಗಳನ್ನು ನಮ್ಮ ಗ್ರಾಮಗಳಲ್ಲಿ ಪಾಲಿಸದೆ ಅತಿ ಕಡಿಮೆ ಬೆಲೆ ಹಾಕಿ ಅವಾರ್ಡ್ ನೋಟಿಸ್ ಕಳುಹಿಸಿರುತ್ತಾರೆ.

ಜಿಲ್ಲಾಧಿಕಾರಿ, ಸಹಾಯಕ ಉಪಾಯುಕ್ತರು, ಶಾಸಕರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಭೂ ಮಾಲೀಕರ ಸಭೆ ಕರೆದಿದ್ದು, ಅದರಲ್ಲಿ ನಮಗೆ ಅತಿ ಕಡಿಮೆ ಪರಿಹಾರ ಮೊತ್ತದ ಅವಾರ್ಡ್ ನೋಟಿಸ್ ಬಂದಿದ್ದು, ಇದರಿಂದ ನಮಗಾಗುವ ತೊಂದರೆ ಮತ್ತು ಅನ್ಯಾಯವನ್ನು ಅವರ ಗಮನಕ್ಕೆ ತಂದಿರುತ್ತೇವೆ. ಆದರೂ ಇದುವರೆಗೆ ಸಮಸ್ಸೆಗೆ ಪರಿಹಾರ ದೊರಕಿಲ್ಲ ಎಂದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ವಿರೋಧವಿಲ್ಲ, ಅಲ್ಲದೆ ಹೆಚ್ಚುವರಿ ಪರಿಹಾರ ಮೊತ್ತವನ್ನು ಕೇಳಿರುವುದಿಲ್ಲ, ಆದರೆ ಪಕ್ಕದ ಸಾಣೂರಿನಿಂದ ಕುಲಶೇಖರ ರಾಷ್ಟ್ರೀಯ ಹೆದ್ದಾರಿ 169 ನಮ್ಮದೇ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದು, ಅವರಿಗೆ ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ನೀಡಿದ್ದ ಪರಿಹಾರವನ್ನು ನಮಗೆ ನೀಡದೆ ಅನ್ಯಾಯವೆಸಗಿದ್ದಾರೆ.

ಈ ತಾರತಮ್ಯದ ಧೋರಣೆಯನ್ನು ನಾವು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಪ್ರಬಲವಾಗಿ ವಿರೋಧಿಸುತ್ತೇವೆ ಎಂದರು.

ಯಾವುದೇ ಕಾರಣಕ್ಕೂ ನ್ಯಾಯಯುತವಾದ ಪರಿಹಾರ ದೊರಕದೆ ನಾವು ನಮ್ಮ ಜಮೀನನ್ನು ಬಿಟ್ಟು ಕೊಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿಯವರು ಹಾಗೂ ಇಲಾಖೆ ಅಧಿಕಾರಿಗಳು ಇದಕ್ಕೆ ಅವಕಾಶ ಕೊಡದೆ ನಮಗೆ ರಾಷ್ಟ್ರೀಯ ಹೆದ್ದಾರಿ 169 ರ ನಿಯಮಗಳಿಗೆ ಅನುಗುಣವಾಗಿ ಕಾನೂನಿನ ಚೌಕಟ್ಟಿ ನೊಳಗೆ ನ್ಯಾಯಯುತವಾದ ಪರಿಹಾರ ನೀಡಬೇಕೆಂದು ಈ ಮೂಲಕ ಆಗ್ರಹಿಸಿದರು.

ಪದ್ಮನಾಭ ನಾಯ್ಕ, ಶ್ಯಾಮ್ ಶೆಟ್ಟಿ, ಮಿಥುನ್, ಕ್ಲಿಂಟನ್ ಕಾಡೋಜ ಮೊದಲಾದವರು ಉಪಸ್ಥಿತರಿದ್ದರು. ‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top