ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯಕೊಂಪೆಗೆ ಮುಕ್ತಿ !
ಸಚಿತ್ರ ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಇಲ್ಲಿಗೆ ಸಮೀಪದ ಅಲಂಗಾರು ರಾಷ್ಟ್ರೀಯ ಹೆದ್ದಾರಿಯ ಒಂದು ಪಾಶ್ವ೯ದ ಗೋಲ್ಡನ್ ಗೇಟ್ ಬಾರ್ ನ ಎದುರುಗಡೆಯಲ್ಲಿ ತ್ಯಾಜ್ಯ ರಾಶಿ ಕೊಂಪೆ ಹಾಕಿ ಸಾಂಕ್ರಾಮಿಕ ರೋಗಾಣುಗಳ ಉತ್ಪಾದನೆಗೆ ಕಾರಣರಾದ ವ್ಯಾಪಾರಸ್ಥರಿಗೆ ಮೂಡಬಿದಿರೆ ಪುರಸಭೆ ನೋಟಿಸ್ ಜಾರಿ ಮಾಡಿದೆ.

ಪುರಸಭಾ ವ್ಯಾಪ್ತಿಯ ಕೊಳಕು ಪ್ರದೇಶಗಳ ಮೇಲೆ ಮೂಡಬಿದಿರೆ ಪುರಸಭೆ ಕಣ್ಗಾವಲು ಇರಿಸಿದ್ದು ಕಳೆದ ಕೆಲದಿನಗಳಿಂದ ಕಾರ್ಯಚರಣೆ ನಡೆಸುತ್ತಾ ಬಂದಿರುವುದಕ್ಕೆ ಪ್ರಜ್ಞಾವಂತ ನಾಗರಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಈ ನಡುವೆ ಅಲಂಗಾರು ಪರಿಸರದ ಕೆಲ ಅಂಗಡಿಗಳವರು ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡಿದ ಎಳನೀರಿನ ಪರಿಕರಗಳು ಸಹಿತ ತ್ಯಾಜ್ಯ ಕಶ್ಮಲ ಗಳನ್ನು ತಂದು ಸುರಿಯುತ್ತಿದ್ದರು.
ಸಾರ್ವಜನಿಕರು ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸುತ್ರಿದ್ದರೂ ಅದ್ಯಾವುದಕ್ಕೆ ಕ್ಯಾರೇ ಅನ್ನದೇ ಕೆಲ ಅಂಗಡಿ ವ್ಯಾಪಾರಸ್ಥರು ತಮ್ಮ ಚಾಳಿ ಮುಂದುವರಿಸಿದ್ದರು.
ಸಾರ್ವಜನಿಕರು ಮೂಡಬಿದಿರೆ ಪುರಸಭೆಗೆ ದೂರು ಸಲ್ಲಿಸಿದರು. ಅದರನ್ವಯ ಸ್ಥಳ ವೀಕ್ಷಣೆ ಮಾಡಿದ ಪುರಸಭಾ ಆರೋಗ್ಯ ಅಧಿಕಾರಿ ಶಶಿರೇಖಾ ಅವರು ಅಗಸ್ಟ್ 14 ರಂದು ಪುರಸಭಾ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸರವನ್ನು ಸ್ವಚ್ಛಗೊಳಿಸಿರುತ್ತಾರೆ.

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದು ಪರಿಸರ ಹದಗೆಡುವಂತೆ ಮಾಡಿದಲ್ಲದೇ ಸಾಂಕ್ರಾಮಿಕ ರೋಗಾಣುಗಳ ಉತ್ಪಾದನೆ ಕಾರಣಕರ್ತರಾದ ಕೆಲ ಅಂಗಡಿ ವ್ಯಾಪಾರಸ್ಥರಿಗೆ ಪುರಸಭೆ ನೋಟಿಸು ಜಾರಿಗೊಳಿಸಲಾಗಿದೆ.































