ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ DBL ಕಂಪೆನಿಯ ಸಿಬ್ಬಂದಿಗಳ ಚಳಿ ಬಿಡಿಸಿದ ತೋಡಾರ್, ಮಿಜಾರ್ ನಾಗರಿಕರು

Picture of RB NEWS

RB NEWS

Bureau Report

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ DBL ಕಂಪೆನಿಯ ಸಿಬ್ಬಂದಿಗಳ ಚಳಿ ಬಿಡಿಸಿದ ತೋಡಾರ್, ಮಿಜಾರ್ ನಾಗರಿಕರು

ಕಾರ್ಕಳ : ಅವೈಜ್ಞಾನಿಕ ರಸ್ತೆ ಕಾಮಗಾರಿ, ಸಮರ್ಪಕ ಸೂಚನಾ ಫಲಕವಿಲ್ಲರಿರುವುದು, ಪಾದಚಾರಿಗಳಿಗೆ ರಸ್ತೆ ದಾಟಲು ಅಂಡರ್ ಪಾಸ್ ಇಲ್ಲದಿರುವುದು. ಹೆದ್ದಾರಿ ನಿರ್ಮಿಸಲು ಸ್ವಾದಿನಪಡಿಸಿದ ಜಮೀನಿನಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು, ಕಾಂಕ್ರಿಟ್ ಮುಗಿಸಿದ ಮೇಲೆ ಒಂದು ದಿನಾನೂ ನೀರು ಹಾಕದೆ ಕ್ಯೂರಿಂಗ್ ಮಾಡದಿರುವುದು, ಕಾಮಗಾರಿ ನಡೆಯುವ ಸ್ಥಳದಲ್ಲಿ ಅಕ್ಕ ಪಕ್ಕದ ಮನೆಗಳಿಗೆ ದೂಳು ತುಂಬಿದರೂ ನೀರು ಹಾಕದೆ ಇರುವುದು ಹೀಗೆ ಹತ್ತು ಹಲವು ಸಮಸ್ಸೆಗಳು ಎದುರಾಗಿದ್ದರೂ ಜನಪ್ರತಿನಿಧಿಗಳಾಗಲಿ, ಇಲಾಖಾಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿದ್ದ ಪ್ರವೃತ್ತಿಗೆ ತೋಡಾರು, ಮಿಜಾರಿನ ನಾಗರಿಕರು ತಕ್ಕ ರೀತಿಯಲ್ಲಿ ಉತ್ತರಿಸಿದ್ದಾರೆ.

ಈ ಬಗ್ಗೆ DBL ಕಂಪನಿಯ ಮುಖ್ಯಸ್ಥರು ಗಳಾದ ರಾಘವ ರಾವ್ ಮತ್ತು ಪ್ರಸಾದ್ ರವಲ್ಲಿ ಕೇಳಿದರೆ ಅವರು ತಮ್ಮ ಜಿಮ್ ಮಾಡಿದ ದೇಹವನ್ನು ತೋರಿಸಿಕೊಂಡು ತೋರು ಬೆರಳನ್ನು ಮೇಲಕ್ಕೆ ಎತ್ತಿ , ಕಣ್ಣುಗಳನ್ನು ಅಗಲಿಸಿ, ತೆಲುಗು ಸಿನಿಮಾದ ವಿಲನ್ ಗಳ ರೀತಿಯಲ್ಲಿ ಅಬ್ಬರಿಸಿ ಬೊಬ್ಬಿಡುತ್ತಾ ಭೂಮಾಲಕರನ್ನು ಮತ್ತು ಜನಸಾಮಾನ್ಯರಲ್ಲಿ ಭಯವನ್ನು ನಿರ್ಮಿಸಿ ಬೆದರಿಕೆ ಹಾಕುತ್ತಿದ್ದರಿಂದ ಆಕ್ರೋಶಭರಿತ ಗ್ರಾಮಸ್ಥರು ತುಳುನಾಡ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಅಂಡರ್ ಪಾಸ್ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿ, ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಕೈಗೊಳ್ಳದಿದ್ದರೆ ವಿಜಾರು ಪರಿಸರದಲ್ಲಿ ಹೆದ್ದಾರಿ ಕಾಮಗಾರಿಯನ್ನು ಮುಂದುವರೆಸಲು ಬಿಡುವುದಿಲ್ಲ ಎಂದು ಹೋರಾಟ ನಿರತರ ಪರವಾಗಿ ಸ್ಥಳೀಯ ಯುವ ಮುಂದಾಳು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಯುವನಾಯಕ ಬ್ರಿಜೇಶ್ ಶೆಟ್ಟಿ ಎಚ್ಚರಿಕೆ ನೀಡಿದರು.

ಹೆದ್ದಾರಿ ಹೋರಾಟ ಸಮಿತಿಯ ಯುವ ನಾಯಕರ ನೇರ ನಿಷ್ಠುರ ನಡೆ-ನುಡಿಯ ಬ್ರಜೇಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಮಿಜಾರು- ತೋಡಾರು ಗ್ರಾಮಸ್ಥರ ಅಂಡರ್ ಪಾಸ್ ಹೋರಾಟಕ್ಕೆ ಹೆದ್ದಾರಿ ಹೋರಾಟ ಸಮಿತಿಯ ವತಿಯಿಂದ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಹೆದ್ದಾರಿ ಹೋರಾಟ ಸಮಿತಿ ಪ್ರಮುಖ ಸಾಣೂರು ನರಸಿಂಹ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಹೋರಾಟ ಮಾಡಿಕೊಂಡೆ ಬರುತ್ತಿದ್ದೇವೆ.

ಪ್ರಜಾಪ್ರಭುತ್ವ ರೀತಿಯ ಹೋರಾಟಕ್ಕೆ ಇನ್ನಾದರೂ ಶಾಸಕರು, ಸಂಸದರು, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳವ ಅನಿವಾರ್ಯ ಎದುರಾಗಿದೆ ಎಂದು ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top