ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರ
ಜಲ್ಲಿ ರಾಶಿಗೆ ಡಿಕ್ಕಿ ಹೊಡೆದ ಕಾರು; ಓರ್ವನ ಸ್ಥಿತಿ ಗಂಭೀರ


ಕಾರ್ಕಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಸುತ್ತಿರುವ ಬೇಕಾಬಿಟ್ಟಿ ಕಾಮಗಾರಿಯಿಂದಾಗಿ ರಸ್ತೆಯ ಮೇಲೆ ಹಾಕಿದ್ದ ಜಲ್ಲಿಕಲ್ಲಿನ ರಾಶಿಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಓರ್ವ ಪ್ರಯಾಣಿಕ ಗಂಭೀರ ಸ್ಪರೂಪದಲ್ಲಿ ಗಾಯಗೊಂಡಿರುವ ಘಟನೆ ಸಾಣೂರು ಎಂಬಲ್ಲಿ ಸಂಭವಿಸಿದೆ.
ಮೂಡಬಿದ್ರೆ ಮೂಲದ ತೇಜಸ್ ಹಾಗೂ ಪ್ರಸಾದ್ ಘಟನೆಯಲ್ಲಿ ಗಾಯಗೊಂಡಿದ್ದು ಅದರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಬ್ರಹ್ಮಾವರದಲ್ಲಿ ಜರುಗಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಮುಗಿಸಿಕೊಂಡು ವಾಪಸ್ ಬರುವಾಗ ಕಾರ್ಕಳ ಸಮೀಪ ಸಾಣೂರು ಎಂಬಲ್ಲಿ ನಸುಕಿನ ಜಾವ 5.00 ಗಂಟೆಗೆ ಸಂಭವಿಸಿದೆ.
ನಿದ್ದೆ ಮಂಪರಿನಲ್ಲಿ ಕಾರು ಚಾಲಕ ರಸ್ತೆಯಲ್ಲಿ ಕೂಡಿ ಹಾಕಲಾಗಿದ್ದ ಜಲ್ಲಿ ರಾಶಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿ ಆದ ಪರಿಣಾಮ ಓರ್ವ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು.
ಸ್ಥಳೀಯರ ಮಾಹಿತಿಯನ್ವಯ ಘಟನಾ ಸ್ಥಳಕ್ಕೆ 108 ಆಂಬುಲೆನ್ಸ್ ತೆರಳಿದ್ದು, ಪ್ರಥಮ ಚಿಕಿತ್ಸೆ ನೀಡಿ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೂಡಬಿದ್ರಿ ಅಲಂಗಾರಿನ ಮೌಂಟ್ ರೋಟರಿ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.
108 ಅಂಬುಲೆನ್ಸ್ ನ ಇ ಎಂ ಟಿ ಮಾಂತೇಶ್ ಪೈಲೆಟ್ ಚಂದ್ರಪ್ಪ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.














