ಮರೀಚಿಕೆಯಾದ ಅಭಿವೃದ್ಧಿ ಕಾಮಗಾರಿ: ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ
ಕಾರ್ಕಳ: ಮಂಗಳೂರು ಬಿಕರ್ನಕಟ್ಟೆಯಿಂದ ಕಾರ್ಕಳದ ಸಾಣೂರು ಬೈಪಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿ- 169 ಇದರ ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿದೆ.
ನಡೆದಿದ್ದ ಒಂದಿಷ್ಟು ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದ್ದು, ಪರಿಣಾಮವಾಗಿ ಅಲ್ಲಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಆನೇಕರು ಅಂಗ ಊನರಾಗಿ ಹಾಸಿಗೆ ಹಿಡಿಯ ಬೇಕಾದ ದುಸ್ಥಿತಿ ಎದುರಾಗಿತ್ತಾಬಂದಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಸಾಣೂರು ಗ್ರಾಮಸ್ಥರು ಪಕ್ಷ ಭೇದ ಮರೆತು ಹೋರಾಟ ಹಾದಿ ಹಿಡಿದು ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ. ಹೋರಾಟದ ಕಾವು ತೀವ್ರ ಗೊಳ್ಳುತ್ತಿದ್ದಂತೆ ಜನಪ್ರತಿನಿಧಿಗಳು(ಚುನಾವಣಾ ಲೆಚ್ಚಚಾರ ಮುಂದಿಟ್ಟು) ಹಾಗೂ ಅಧಿಕಾರಿಗಳು ಅಗೊಮ್ಮೆ ಈಗೊಮ್ಮೆ ಘಟನಾಸ್ಥಳಕ್ಕೆ ಅಗಮಿಸಿ ಕಣ್ಣೋರೆಸುವ ತಂತ್ರದ ಭಾಗವಾಗಿ ಕೆಲ ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆಯೇ ಹೊರತು ಸಮಸ್ಸೆ ಮಾತ್ರ ಯಥಾಸ್ಥಿತಿಯಾಗಿ ಮುಂದುವರಿದಿದೆ.
ಅದರ ಮುಂದುವರಿದ ಭಾಗವಾಗಿ…….







































