ರಾಷ್ಟ್ರೀಯ ಭಾವೈಕ್ಯತೆ -ನಕ್ರೆ ಜೋಜ್೯ ಮಾಸ್ಟರ್

Picture of RB NEWS

RB NEWS

Bureau Report

ರಾಷ್ಟ್ರೀಯ ಭಾವೈಕ್ಯತೆ 

ಸಾಮಾಜಿಕ ಜಾಲತಾಣದಲ್ಲಿ “ಆರ್. ಬಿ ನ್ಯೂಸ್” (ರಾಷ್ಟ್ರೀಯ ಭಾವೈಕ್ಯತೆ) ತನ್ನ ಒಂದು ವರ್ಷದ ಸುದ್ದಿ ಪ್ರಸಾರದ ಸೇವೆಯನ್ನು ಇದೇ ಫೆಬ್ರವರಿ 17ನೇ ತಾರೀಕಿದಂದು ಪೂರೈಸುವ ಸು ಸಂದರ್ಭದಲ್ಲಿ ನನ್ನ ಮಿತ್ರ ನ್ಯಾಯಪರ ಹೋರಾಟಗಾರ ಆರ್.ಬಿ. ಜಗದೀಶ್ ಅವರಿಗೆ ಅಭಿನಂದಿಸುತ್ತೇನೆ.  ಅವರ ಮಾಲೀಕತ್ವದ ಈ ಸುದ್ದಿ ಸಂಸ್ಥೆ ತಮ್ಮ ಧ್ಯೇಯವಾಕ್ಯ ರಾಷ್ಟ್ರೀಯ ಭಾವೈಕ್ಯತೆಯ ಸಿದ್ಧಾಂತದಂತೆ ಕಾರ್ಯಪ್ರವೃತ್ತರಾದುದು   ಈಗಿನ 

ಕಾಲಘಟ್ಟದಲ್ಲಿ ಅತ್ಯಂತ ಸೂಕ್ತವೆಂದು ನನ್ನ ಭಾವನೆ. ಮುಂದಿನ ವರ್ಷಗಳಲ್ಲಿ  ಗುಣಮಟ್ಟ ಸೇವೆ ನೀಡುವಂತಾಗಲಿ ಎಂದು ಹಾರೈಸುತ್ತೇನೆ.

 ವಿವಿಧ ಭಾಷೆ, ಜಾತಿ, ಮತ, ಧರ್ಮ, ಸಂಸ್ಕೃತಿಗಳ ನೊಳಗೊಂಡ ನಮ್ಮ  ಭಾರತ ದೇಶ ಶಾಂತಿಯ ತೋಟವಾಗಿ ಜಗತ್ತಿಗೆ ಮಾದರಿಯಾಗಿ ತೋರಿಸಬೇಕಾದ ಕರ್ತವ್ಯ ದೇಶದ ಪ್ರತಿ ನಾಗರಿಕರಿಗೆ ಇದೆ. ಒಂದು ರಾಷ್ಟ್ರ ಎಂದರೆ ವಿಶ್ವಸಂಸ್ಥೆಯು ಮಾನ್ಯತೆ ನೀಡಿದ ನಾಲ್ಕು ಗಡಿಗಳ ವ್ಯಾಪ್ತಿಯಲ್ಲಿ ವಿಸ್ತರಿಸಿದ ನೆಲ ಮಾತ್ರ ಅಲ್ಲ. ಅಲ್ಲಿ ನೆಲೆಸಿರುವ ಮಾನವ ಸಂಪತ್ತು ಹಾಗೂ ಅಲ್ಲಿರುವ ಪ್ರಾಣಿ ಪಕ್ಷಿಗಳ ನೊಳಗೊಂಡ ಪ್ರಕೃತಿ ಸಂಪತ್ತು ಕೂಡ ಸೇರಿದೆ ಎಂದು ತಿಳಿದಿರಬೇಕಾಗುತ್ತದೆ.

ಸಾವಿರಾರು ವರ್ಷಗಳಿಂದ ನಮ್ಮ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿ ಇತ್ತೀಚಿನ ವರ್ಷಗಳವರೆಗೂ ಉಳಿಸಿಕೊಂಡಿತ್ತು. ಅದ ರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಹ ಸಾಧಿಸಿದೆ. ವೈಜ್ಞಾನಿಕವಾದ ಸಾಧನೆಯ ಫಲವಾಗಿ ಗ್ಲೋಬಲ್ ವಿಲೇಜ್ ಎಂದು ಕರೆಯಲ್ಪಟ್ಟಿದೆ. ಇದರ ಫಲವಾಗಿ ಇಡೀ ಜಗತ್ತಿನ ಹಾಗೂ ಹೋಗುಗಳನ್ನು ಕ್ಷಣಮಾತ್ರದಲ್ಲಿ ಜಗತ್ತಿನದ್ಯಾಂತ ಪಡೆಯಬಹುದು. 

 ಇಂತಹ ವೈಜ್ಞಾನಿಕ ಮಾನ್ಯತೆ ಅಭಿವೃದ್ಧಿಗೆ ಪೂರಕವಾದರೂ, ಮಾಧ್ಯಮಗಳು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಂಡರೆ ದೇಶದ ಜನರ ಮನೆ- ಮನಗಳಲ್ಲಿ ಜಾತಿ, ಧರ್ಮ, ಭಾಷೆಗಳಲ್ಲಿ ದುಷ್ಪರಿಣಾಮ ಉಂಟಾಗಿ ರಾಷ್ಟ್ರದ ಭಾವೈಕ್ಯತೆಯಲ್ಲಿ  ಶಿಥಿಲತೆಯಾಗಬಹುದು.

 ತತ್ಫಲವಾಗಿ ದೇಶದ ಅಭಿವೃದ್ಧಿಗೆ ಮಾರಕವಾಗಬಹುದು. ಆದುದರಿಂದ ರಾಷ್ಟ್ರದ ಭಾವೈಕತೆಯನ್ನು ಉಳಿಸಿ ಪಾಲಿಸಿಕೊಂಡು ಬರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.

ಸ್ವಾಮಿ ವಿವೇಕಾನಂದರು ಹೇಳುವಂತೆ ಲೌಕಿಕ ಜಗತ್ತಿನಲ್ಲಿ ಅಥವಾ ಧಾರ್ಮಿಕ ಜಗತ್ತಿನಲ್ಲಿ ಆಗಲಿ ಭಯವೇ ಪಾಪ ಮತ್ತು ಅವನತಿಗೆ ಕಾರಣ. ದುಃಖ, ಸಾವು, ಅನಂತ ಪಾಪಗಳ ಮೂಲಕ್ಕೆ ಈ ಭಯವೇ ಕಾರಣ. ಈ ಭಯಕ್ಕೆ ನಮ್ಮಲ್ಲಿರುವ  ದೌರ್ಬಲ್ಯ ಕಾರಣ. ಪಾಪಗಳಿಗೆ ಪ್ರೇರೇಪಿಸುವುದು ಇತರರನ್ನು ಹಿಂಸಿಸುವಂತೆ ಮಾಡುವುದು  ಅಲ್ಲದೇ ತಾವು ಏನು ಅಲ್ಲವೋ ಅದರಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುವುದಕ್ಕೆ ಕಾರಣ  ದೌರ್ಬಲ್ಯ ಎಂದು ಹೇಳಿರುವರು. -ಮುಂದುವರಿದು ಅವರು ಹೇಳುತ್ತಾರೆ, ಧರ್ಮದ ವಿಷಯದಲ್ಲಿ ಜಗಳ ಕಾಯಬಾರದು. ಆಧ್ಯಾತ್ಮ ಮತ್ತು ಪಾವಿತ್ರ್ಯ  ಯಾವಾಗಲ ಇಲ್ಲವೋ ಆಗ ಆತ್ಮ ಶುಷ್ಕ ವಾಗುತ್ತದೆ. ಧರ್ಮವೆಂದರೆ ಮಾತಲ್ಲ. ಹೆಸರಲ್ಲ. ಪಂಥವಲ್ಲ ಅದು ಆಧ್ಯಾತ್ಮಿಕ ಸಾಕ್ಷಾತ್ಕಾರ, ಸತ್ಯ, ಸಂತತೆ, ಪರಿಶುದ್ಧತೆ, ನಿಸ್ವಾರ್ಥ.  ಅದು ಎಲ್ಲಿ ಇದ್ದರೂ ಅಡಗಿಸುವ ಶಕ್ತಿ ಅದು ಇಹ -ಪರಗಳಲ್ಲಿ ಇಲ್ಲ  . ಈ ಗುಣಗಳಿದ್ದರೆ ಅಂತಹ ವ್ಯಕ್ತಿ ಪ್ರಪಂಚವನ್ನ ಎದುರಿಸಬಲ್ಲ ಸ್ವಾಮಿ ವಿವೇಕಾನಂದರ ಮಾತನ್ನು ಅರಿತು ಬಾಳಿದರೆ  ಭಾವ್ಯಕ್ಯತೆಯಿಂದ ಬಾಳಲು ಸಾಧ್ಯವಾಗುವುದು.

 ನನಗೆ ಎಲ್ಲಿಯೋ ಓದಿದ ನೆನಪು ಪ್ರತಿಯೊಬ್ಬರು ಅವರ ಧರ್ಮ ಎಂದರೆ ಅವರವರ ಹೆತ್ತಮ್ಮನಂತೆ. ಇತರ ಧರ್ಮಗಳು ಅಮ್ಮನ ಸಹೋದರಿಯರು. ಅಂದರೆ ದೊಡ್ಡಮ್ಮ, ಚಿಕ್ಕಮ್ಮ ಇದ್ದಹಾಗೆ. ಪ್ರತಿಯೊಬ್ಬರಿಗೂ ಅವರ ಅಮ್ಮನ ಮೇಲೆ ವಿಶೇಷ ಪ್ರೀತಿ ಇದೆ. ಆದರೆ ದೊಡ್ಡಮ್ಮ, ಚಿಕ್ಕಮ್ಮ ಮೇಲೆ ದ್ವೇಷ ಇಲ್ಲ ಅವರನ್ನು ಪ್ರೀತಿಸುತ್ತಾರೆ. ಇಂತಹ ಮನಸ್ಥಿತಿ ಪ್ರತಿ ಧರ್ಮದವರು ಬೆಳೆಸಿಕೊಂಡರೆ ಎಲ್ಲರ ಮನೆ -ಮನಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬೆಳೆ ಬಲ್ಲದು. 

ಭಾವೈಕ್ಯತೆ ಮಾಧ್ಯಮಗಳ ಪಾತ್ರ ಮಹತ್ವದ್ದು. ಅವರು ಸೂಕ್ಷ್ಮ ವಿಚಾರಗಳನ್ನು ಸುದ್ಧಿ ಮಾಡುವಾಗ ಆ ಸುದ್ದಿಯು ಓದುಗರ ಮನಸನ್ನು ಕೆರಳಿಸಬಾರದು. ಅರಳಿಸುವಂತಾಗಬೇಕು. ವೃತ್ತಿ ಪ್ರವೃತ್ತಿಯಲ್ಲಿ, ನಿತ್ಯ ಜೀವನದಲ್ಲಿ ಭಾವನೆಗಳನ್ನು ಕೆರಳಿಸದೆ ಐಕ್ಯತೆ ಬೆಳೆಸುವ ಪ್ರಯತ್ನ ಮಾಡೋಣ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top