ರಾಷ್ಟ್ರಮಟ್ಟದ ಈಜು ಸ್ಪರ್ಧೆ: ದ್ವಿತೀಯ ಸ್ಥಾನ ವಾಣಿ ಬಗಲಿಗೆ

Picture of RB NEWS

RB NEWS

Bureau Report

ಗುಜರಾತ್ (ಗಾಂಧಿನಗರ) :ಗುಜರಾತಿನ ಗಾಂಧಿನಗರದಲ್ಲಿ ಮಾಚ್೯ 5ರಿಂದ 07ರ ತನಕ ಜರುಗಿದ್ದ ರಾಷ್ಟ್ರಮಟ್ಟದ ಅಖಿತ ಭಾರತ ನಾಗರಿಕ ಸೇವಾ ಈಜು ಪಂದ್ಯಾವಳಿ ಏರ್ಪಡಿಸಲಾಗಿತ್ತು.

ಈಜುಸ್ಪರ್ಧೆಯಲ್ಲಿ ಭಾರತದ 26 ರಾಜ್ಯಗಳಿಂದ ಕ್ರೀಡಾಳುಗಳು ಭಾಗವಹಿಸಿರುತ್ತಾರೆ. ಇವರು ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ 4 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ. ರಾಜ್ಯಗಳ ಸ್ಪರ್ಧಿಗಳು ಗುಜರಾತ್ ಗಾಂಧಿನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಈಜುಪಟುಗಳು ಹಾಗೂ ಅನೇಕ ರಾಷ್ಟ್ರೀಯ ಈಜು ಪಟುಗಳ ಜೊತೆ ಸುಮಾರು 250 ಕ್ಕೂ ಹೆಚ್ಚು, ದೇಶದ 26 ರಾಜ್ಯಗಳ ಸ್ಪರ್ಧಾಳುಗಳ ಜೊತೆಯಲ್ಲಿ ಗೆಲುವು ಸಾಧಿಸಿರುತ್ತಾರೆ.

ವಾಣಿ ಇವರು ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಬಾಲಚಂದ್ರ ಕೆ ಆರ್ ರವರ ಪತ್ನಿ ಹಾಗೂ ಉಳಿಯಾರು ದಿ. ರಘುಪತಿ ಭಟ್ ಹಾಗೂ ವಿಜಯಲಕ್ಷ್ಮೀ ಇವರ ಪುತ್ರಿಯಾಗಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top