84ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕ್ರೀಡಾಕೂಟ





ರಾಷ್ಟ್ರಮಟ್ಟದಲ್ಲಿ ಮಿಂಚಿದ ‘ಆಳ್ವಾಸ್ ‘
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: 73 ವಿದ್ಯಾರ್ಥಿಗಳನ್ನು ಪ್ರತಿನಿಧಿಸಿದ ಆಳ್ವಾಸ್ ಸಂಸ್ಥೆಯವರು ರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸಮಗ್ರ ಚಾಂಪಿಯನ್ಸ್ ಪ್ರಶಸ್ತಿಯನ್ನು ಎಂಟನೇ ಬಾರಿಗೆ ಗಳಿಸುವಲ್ಲಿ ಅಪ್ರತಿಮ ಸಾಧನೆಯನ್ನು ತೋರಿಸಿರುತ್ತಾರೆ.
ದ್ವಿತೀಯ ಸ್ಥಾನದಿಂದ 36 ಅಂಕಗಳ ಅಂತರವನ್ನು ಕಾಯ್ದುಕೊಂಡು ಒಟ್ಟಾರೆ 121 ಅಂಕಗಳೊಂದಿಗೆ ಈ ಸಾಧನೆಯನ್ನು ಆಳ್ವಾಸ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ತೋರಿಸಿಕೊಟ್ಟಿದ್ದಾರೆ.

17 ಪದಕಗಳಲ್ಲಿ 5 ಚಿನ್ನ 5 ಬೆಳ್ಳಿ ಏಳು ಕಂಚಿನ ಪದಕಗಳ ವಿಜೇತರೆಲ್ಲರೂ ಅಳ್ವಾಸ್ ವಿದ್ಯಾರ್ಥಿಗಳು ಎನ್ನುವುದು ಹೆಮ್ಮೆಯ ಸಂಗತಿ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ . ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡರು.
ಆಳ್ವಾಸ್ ವಿದ್ಯಾರ್ಥಿಗಳು ಎರಡು ನೂತನ ಕೂಟದ ಕಲೆಯನ್ನು ದಾಖಲಿಸಿದ್ದಲ್ಲದೆ ಒಂದು ಕೂಟ ದಾಖಲೆಯನ್ನು ಉತ್ತಮಗೊಳಿಸಿಕೊಂಡರು. ಮಹಿಳಾ ವಿಭಾಗದಲ್ಲಿ ಬೆಸ್ಟ್ ಅಥ್ಲೆಟ್ ಗೌರವಕ್ಕೆ ಪಾತ್ರರಾದವರು ಕೂಡ ಆಳ್ವಸ್ ನ ಮಂಜು ಯಾದವ್ ಅವರು. ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಹೆಸರಿನಲ್ಲಿರುವ ಆರು ನೂತನ ಕೂಟ ದಾಖಲೆಗಳೆಲ್ಲವೂ ಆಳ್ವಾಸ್ ಹೆಸರಿನಲ್ಲಿ ಇದೆ.
ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಡಿಸೆಂಬರ್ 26 ರಿಂದ 30 ರವರೆಗೆ 84ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆದಿತ್ತು.
ಪದಕಗಳ ವಿವರ :-ಪುರುಷರ ವಿಭಾಗದಲ್ಲಿ 5000 ಮೀಟರ್ ಓಟದಲ್ಲಿ ಗಗನ ಪ್ರಥಮ, 20 ಕಿಲೋ ಮೀಟರ್ ನಡಿಗೆಯಲ್ಲಿ ಸಚಿನ್ ಪ್ರಥಮ, 800 ಮೀಟರ್ ಓಟದಲ್ಲಿ ತುಷಾರ್ ತೃತೀಯ, 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ರೋಹಿತ್ ತೃತೀಯ, ಐದು ಸಾವಿರ ಮೀಟರ್ ಓಟದಲ್ಲಿ ಅಮಾನ್ ಕುಮಾರ್ ತೃತೀಯ ಸ್ಥಾನವನ್ನು ಪಡೆದರು.
ಮಹಿಳೆಯರ ವಿಭಾಗದಲ್ಲಿ 3000 ಮೀಟರ್ ಪೀಪಲ್ ಚೇಸ್ ನಲ್ಲಿ ಮಂಜು ಯಾದವ್ ಪ್ರಥಮ, ಮ್ಯಾರಥಾನ್ನಲ್ಲಿ ಕೆಎಂ ಸೋನಿಯಾ ಪ್ರಥಮ, 400 ಮೀಟರ್ ಹರ್ಡಲ್ಸ್ ನಲ್ಲಿ ದೀಕ್ಷಿತ ದ್ವಿತೀಯ, ಉದ್ದ ಜಿಗಿತದಲ್ಲಿ ಸಿಂಚನ ಎಂಎಸ್ ದ್ವಿತೀಯ, ಜಾವೆಲಿನ್ ತ್ರೋ ನಲ್ಲಿ ಸಾಕ್ಷಿ ಶರ್ಮ ದ್ವಿತೀಯ, ಪೋಲ್ ವಾಲ್ಟ್ ನಲ್ಲಿ ಸಿಂಧುಶ್ರೀ ಜಿ ದ್ವಿತೀಯ, ಹೆಪ್ಟಾತ್ಲಾನ್ ನಲ್ಲಿ ಕಮಲ್ಜಿತ್ ದ್ವಿತೀಯ, 10000 ಮೀಟರ್ ಓಟದಲ್ಲಿ ಜ್ಯೋತಿ ತೃತೀಯ, 20 ಕಿಲೋ ಮೀಟರ್ ನಡಿಗೆಯಲ್ಲಿ ಕೆಎಂ ಶಾಲಿನಿ ತೃತೀಯ, ಮ್ಯಾರಥಾನ್ ನಲ್ಲಿ ಜ್ಯೋತಿ ತೃತೀಯ, 400 ಮೀಟರ್ ಹರ್ಡಲ್ಸ್ ನಲ್ಲಿ ಪ್ರಜ್ಞೆಗೆ ದ್ವಿತೀಯ ಸ್ಥಾನ ಪಡೆದರು. ಮಿಕ್ಸೆಡ್ ರಿಲೇ ಯಲ್ಲಿ ತೀರ್ಥೇಶ್ ಶೆಟ್ಟಿ, ಅನೋಜ್, ದಿಶಾ, ಪ್ರಜ್ಞ ರ ತಂಡಕ್ಕೆ ಪ್ರಥಮ ಸ್ಥಾನ ದೊರಕಿತು.
ನೂತನ ಕೂಟ ದಾಖಲೆ: 20 ಕಿಲೋಮೀಟರ್ ನಡಿಗೆ ಊಟವನ್ನು ಸಚಿನ್ ಸಿಂಗ್ 1.23.32 ಸೆಕೆಂಡ್ ನಲ್ಲಿ ಕ್ರಮಿಸಿ ನೂತನ ಕೂಟ ದಾಖಲೆ ನಿರ್ಮಿಸಿದರು.
ಮಹಿಳೆಯರ ವಿಭಾಗದ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಮಂಜು ಯಾದವ್ 10.00.14 ಸೆಕುಂಡಿನಲ್ಲಿ ಗುರಿ ಮುಟ್ಟಿ ನೂತನ ದಾಖಲೆ ನಿರ್ಮಿಸಿದರು.
ಸಾಕ್ಷಿ ಶರ್ಮ ಜಾವೆಲಿನ್ ಥ್ರೋ ವಿಭಾಗದಲ್ಲಿ ಪೂನಂ ರಾಣಿಯ ಹೆಸರಿನಲ್ಲಿದ್ದ ದಾಖಲೆಯನ್ನು 53.41 ಮೀಟರ್ ದೂರ ಎಸೆಯುವ ಮೂಲಕ ಉತ್ತಮ ಪಡಿಸಿದರು.
ಬೆಸ್ಟ್ ಅಥ್ಲೆಟ್: 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ನೂತನ ಕೂಟ ದಾಖಲೆ ಸ್ಥಾಪಿಸಿದ ಆಳ್ವಾಸ್ ನ ಮಂಜು ಯಾದವ್ ಮಹಿಳಾ ವಿಭಾಗದ ಬೆಸ್ಟ್ ಅಥ್ಲೆಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲ ಎಂಟು ಸ್ಥಾನಗಳಿಸಿದ ಆಳ್ವಾಸ್ ನ ಕ್ರೀಡಾಪಟುಗಳು ಖೇಲೋ ಇಂಡಿಯಾ ಗೇಮ್ಸ್ ಗೆ ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿ ಭಾಗವಹಿಸಿ ಕೀರ್ತಿ ತಂದ ಎಲ್ಲರಿಗೂ ಅಭಿನಂದನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿದ್ದಾರೆ.






































