ರಾಷ್ಟ್ರಪಿತ ಮಹಾತ್ಮಗಾಂಧಿಯ ಜನ್ಮದಿನಾಚರಣೆ: ಸ್ವಚ್ಚತೆಗೆ ಒತ್ತು ನೀಡಿದ ಸಾಣೂರು ಯುವಕ ಮಂಡಲ
ಕಾರ್ಕಳ : ರಾಜ್ಯ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಹಾಗೂ ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ ನೇತೃತ್ವದಲ್ಲಿ ಸೆ. 17. ಅ. 2 ರ ವರೆಗೆ ಗಾಂಧಿ ಜಯಂತಿ ಪ್ರಯುಕ್ತ ನಡೆಯುವ “ಸ್ವಚ್ಛತಾ ಹಿ ಸೇವಾ 2024” ಕಾರ್ಯಕ್ರಮದ ಭಾಗವಾಗಿ ಸ್ವಚ್ಚತಾ ಕಾರ್ಯಕ್ರಮ ನಡೆಯುತ್ತಿದೆ.





ಸಾಣೂರು ಬಸವಲಿಂಗೆಶ್ವರ ದೇವಸ್ಥಾನದ ಸುತ್ತ ಮುತ್ತ, ಸಾಣೂರು ಅಮೃತ ಸರೋವರ ಉದ್ಯಾನವನ,ಪುಲ್ಕೇರಿ ಬೈಪಾಸ್ ಬಸ್ಟ್ಯಾಂಡ್ ಸುತ್ತ ಮುತ್ತ, ಸಾಣೂರು ಮಠದ ಕೆರೆಯ ಬಳಿಯ ಮೈದಾನದ ಸ್ವಚ್ಛತೆಯನ್ನು ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಎಂ. ಸಿ, ಮತ್ತು ಮಂಡಲದ ಕಾರ್ಯದರ್ಶಿ ಪ್ರಕಾಶ್ ರಾವ್, ಜೊತೆ ಕಾರ್ಯದರ್ಶಿ ಪ್ರಮಿತ್ ಸುವರ್ಣ, ಸುನೀಲ್, ಪ್ರಸನ್ನ ಆಚಾರ್ಯ, ರಾಜೇಶ್ ಪೂಜಾರಿ, ವಿದ್ಯಾನಂದ ಕೋಟ್ಯಾನ್, ಪ್ರಶಾಂತ್ ಆಚಾರ್ಯ, ಜಯನ್ ಶೆಟ್ಟಿ, ಮುರಳೀಧರ ಸುವರ್ಣ, ಪ್ರವೀಣ್ ಶೆಟ್ಟಿ, ಮೋಹನ್ ಶೆಟ್ಟಿ, ದಿನೇಶ್ ಶೆಟ್ಟಿಗಾರ್, ರೋಹಿತ್ ಆರ್ ಕೆ., ಜಯಶೆಟ್ಟಿಗಾರ್, ಮಂಜುನಾಥ್ ರಾವ್, ಸಮಿತ್ ಆಚಾರ್ಯ, ರಾಕೇಶ್ , ಸುವಿತ್ ಮಾಸ್ಟರ್ ವೀಕ್ಷಣ್, ದಿಶಾನ್, ಬೇಬಿ ಧನ್ಯಶ್ರೀ ಮತ್ತಿತರರು ಭಾಗವಹಿಸಿದ್ದರು































