ರಾಮಕ್ಷತ್ರಿಯ ಸಮಾಜದವರಿಗೆ ಸಾಥ್ ನೀಡಿದ ಮರಾಠ ಕ್ಷತ್ರಿಯ ಸಮಾಜ
ಕಾರ್ಕಳ : ಶೃಂಗೇರಿ ಶ್ರೀ ಜಗದ್ಗುರುಗಳ ಚಾತುರ್ಮಾಸ ಗುರುವಂದನಾ ಕಾರ್ಯಕ್ರಮಕ್ಕೆ ರಾಮಕ್ಷತ್ರಿಯ ಸಮಾಜದ ಬಂಧುಗಳು ಕಾರ್ಕಳ, ಉಡುಪಿ, ಮಂಗಳೂರು, ಉಳ್ಳಾಲ, ಪುತ್ತೂರು,ಬೆಳ್ತಂಗಡಿ, ಕಾಸರಗೋಡು, ಮುಲ್ಕಿ, ಮೂಡುಬಿದ್ರೆ. ಮೊದಲಾದವರು ಶೃಂಗೇರಿಗೆ ಹೊರಟಿದ್ದರು.

ಕಾರ್ಕಳದ ಬಜಗೋಳಿಯಲ್ಲಿ ಬೆಳಿಗ್ಗಿನ ಉಪಾಹಾರವನ್ನು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ತಾಲೂಕು ಘಟಕ ವತಿಯಿಂದ ಬಡಿಸಲು ಸಿದ್ಧರಾದ ಸ್ವಯಂಸೇವಕರು.

ರಾಮಕ್ಷತ್ರಿಯ ಸಂಘ (ರಿ ) ಕಾರ್ಕಳ, ಸಮಾಜ ಬಾಂಧವರಿಂದ ಶೃಂಗೇರಿ ದರ್ಶನ, ಪಾದಪೂಜೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.






































