ರಾಮಕ್ಷತ್ರಿಯ ಸಂಘ ಕಾರ್ಕಳ ಕ್ರೀಡಾಕೂಟ ಸಂಪನ್ನ

Picture of RB NEWS

RB NEWS

Bureau Report

ಕಾರ್ಕಳ: ಸಮುದಾಯದ ಸಹಭಾಗಿತ್ವ ಧ್ಯೇಯದೊಂದಿಗೆ ನಡೆದ ರಾಮಕ್ಷತ್ರಿಯ ಸಂಘ ಕಾರ್ಕಳ ಇದರ ರಾಮಕ್ಷತ್ರಿಯ ಕ್ರೀಡೋತ್ಸವ-2025 ಇದರ ಸಮಾರೋಪ ಸಮಾರಂಭವು ಕಾರ್ಕಳ ಸ್ವರಾಜ್ ಮೈದಾನದಲ್ಲಿ ನೆರವೇರಿತು.
ಕಾರ್ಕಳ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಅಧ್ಯಕ್ಷತೆವಹಿಸಿ, ರಾಮಕ್ಷತ್ರಿಯ ಸಮಾಜದ ಒಗ್ಗಟ್ಟಿನ ಸಹಭಾಗಿತ್ವದಲ್ಲಿ ನಡೆದ ಕ್ರೀಡಾಕೂಟ ಕ್ರೀಡಾಕೂಟವಾಗಿರದೆ ಕ್ರೀಡೋತ್ಸವವಾಗಿ ಎಲ್ಲರ ಸಂತೋಷಕ್ಕೆ ಕಾರಣವಾಗಿ ಸರ್ವರ ಸಹಕಾರದಿಂದ ಯಶಸ್ವಿಯಾಗಿದೆ ಎಂದರು.
ಮುಖ್ಯ ಅತಿಥಿಯವರಾಗಿ ಭಾಗವಹಿಸಿದ ಮೂಡಬಿದ್ರೆ ಪುರಸಭಾ ಅಧಿಕಾರಿ ಜ್ಯೋತಿ.ಬಿ.ಎಸ್ ಮಾತನಾಡಿ, ಸಮಾಜದ ಒಗ್ಗಟ್ಟಿಗೆ ಕ್ರೀಡಾಕೂಟ ಪೂರಕವಾಗಿದೆ. ಸಮಾಜದ ಶೇ. 60ಕ್ಕಿಂತ ಹೆಚ್ಚಿನ ಅಂಗವಿಕಲರಿಗೆ ತನ್ನ ವೈಯಕ್ತಿಕವಾದ ಸಹಾಯ, ಸಹಕಾರ ನೀಡುವುದಾಗಿ ಹೇಳಿ, ವಿಶೇಷ ಲಕ್ಕಿ ಕೂಪನ್ ವಿಜೇತರಿಗ ಬಹುಮಾನವನ್ನು ವಿತರಿಸಿದರು.
ಕಾರ್ಕಳ ರಾಮಕ್ಷತ್ರಿಯ ಸಂಘದ ಗೌರವಾಧ್ಯಕ್ಷ ಪ್ರಸನ್ನ ಕೆ.ಬಿ, ಉಪಾಧ್ಯಕ್ಷ ಅಂಬಾಪ್ರಸಾದ್.ಪಿ, ಕ್ರೀಡಾ ಕಾರ್ಯದರ್ಶಿ ಸಂಕೇತ್.ಎನ್.ರಾವ್ ಬೈಲೂರು ಗೌರವ ಉಪಸ್ಥಿತರಿದ್ದರು.
ವಿಜೇತರಾಣಿ ಅಂಡಾರು ಸ್ವಾಗತಿಸಿ, ನಿರೂಪಿಸಿದರು.
ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕ್ರೀಡೆಗಳು ಪ್ರತ್ಯಕವಾಗಿ ನಡೆದವು. ವಿಜೇತರಿಗೆ ಬಹುಮಾನಗಳನ್ನು ಸಂಘದ ಮುಂದಿನ ವಾರ್ಷಿಕೋತ್ಸವ ದಿನದಂದು ವಿತರಿಸಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top