ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ: ಸ್ವಾತಂತ್ರ್ಯೋತ್ಸವ ಆಚರಣೆ
ಕಾರ್ಕಳ: ರಾಮಕ್ಷತ್ರಿಯ ಸಂಘ(ರಿ)ದ ವತಿಯಿಂದ, ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಶ್ರೀರಾಮ ಸಭಾಭವನ ಬಂಡಿಮಠ ಕಾರ್ಕಳದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ನೀರೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷೆ ಶಕುಂತಳಾ.ಎಸ್.ರಾವ್ ನೀರೆ ಧ್ವಜಾರೋಹಣವನ್ನು ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ವಿಶ್ವನಾಥನ್. ಪಿ.ನಿಟ್ಟೆ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಪ್ರಸನ್ನ ಕೆ.ಬಿ ಮತ್ತು ಪಾರ್ಥಸಾರಥಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಮಹೇಶ್ ರಾವ್ ಬೈಲೂರು ಆಶಯ ಭಾಷಣವನ್ನು ಮಾಡಿದರು.
ಪ್ರಶಾಂತ್ ಮುಡಾರ್ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಸಂಕೇತ್. ಎನ್.ರಾವ್ ಬೈಲೂರು ವಂದಿಸಿದರು.
ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.






































