ರಾತ್ರಿವರೆಗೆ ಪುರಸಭೆ ಮಹಿಳಾ ಸಿಬ್ಬಂದಿಗಳಿಗೆ ಸಭೆ ನಡೆಸಿದ ಯೋಜನಾ ನಿರ್ದೇಶಕ…
RB NEWS
Bureau Report
ರಾತ್ರಿವರೆಗೆ ಪುರಸಭೆ ಮಹಿಳಾ ಸಿಬ್ಬಂದಿಗಳಿಗೆ ಸಭೆ ನಡೆಸಿದ ಯೋಜನಾ ನಿರ್ದೇಶಕ…
ಸಭೆ ಆರಂಭಿಸಿದ ವೇಳಾವಧಿ….
..
ಕಾರ್ಕಳ : ಕಾರ್ಕಳ ಪುರಸಭೆ ಸಿಬ್ಬಂದಿಗಳಿಗೆ ರಾತ್ರಿ ವರೆಗೆ ಸಭೆ ನಡೆಸಿದ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ ಮಹಿಳಾ ಸಿಬ್ಬಂದಿಗಳನ್ನು ಗದರಿಸಿ ಬೆದರಿಸಿ ಏಕವಚನ ಬೈದು ಅವಮಾನ ಮಾಡಿ ಕೆಲಸದಿಂದಲೇ ಕಿತ್ತು ಹಾಕುತ್ತೇನೆ ಎಂದು ಸಿಟ್ಟಿನಿಂದ ಅತಿರೇಕವಾಗಿ ವರ್ತಿಸಿದ ಘಟನೆ ಕಾರ್ಕಳ ಪುರಸಭೆಯಲ್ಲಿ ನಡೆದಿದೆ
ಬುಧವಾರ ಸಾಯಂಕಾಲ 5.15ಕ್ಕೆ ಕಾರ್ಕಳ ಪುರಸಭೆ ಕಚೇರಿಗೆ ಬಂದ ಯೋಜನಾ ನಿರ್ದೇಶಕ ಸುಬ್ರಮಣ್ಯ ಸೆಟ್ಟಿ ನೇತೃತ್ವದ ತಂಡ ಸಿಬ್ಬಂದಿಗಳನ್ನು ಕಚೇರಿ ಸಮಯವಾದರೂ ಹೋಗದಂತೆ ಅದೇಶಿಸಿ ಪುರಸಭಾ ಮುಖ್ಯಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸುಬ್ರಮಣ್ಯ ಸೆಟ್ಟಿ ಪೌರ ಕಾರ್ಮಿಕರ ಕೊರತೆ ಇದೆ ಇರುವ ಪೌರ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆ ಮನೆ ಮನೆ ಕಸ ಸಂಗ್ರಹಣೆ ಹಾಗೂ ನಗರ ಸುಂದರೀಕರಣ, ಚರಂಡಿ ಸ್ವಚ್ಛತೆ ಮಾಡಲಾಗ್ತುತಿದೆ ಎಂದು ವಿವರಣೆ ನೀಡುತ್ತಿದ್ದಾಗ ಏಕ ಏಕಿ ಮಹಿಳಾ ಸಿಬ್ಬಂದಿಗೆ ಏಕವಚನದಲ್ಲಿ ಬೈದು ನಿಂದಿಸಿ ಅವಮಾನಿಸುವುದರ ಜೊತೆಗೆ ನಿನ್ನನ್ನು ಇಲ್ಲಿಂದ ಓಡಿಸ್ತೇನೆ ಬೆದರಿಕೆ ಹಾಕಿರುವ ಬಗ್ಗೆ ತಿಳಿದು ಬಂದಿದೆ
ತನ್ನ ಕಂಪ್ಯೂಟರ್ ನಲ್ಲಿರುವ ಇಂಜಿನಿಯರಿಂಗ್ ವಿಭಾಗದ ಕಡತಗಳು ಉದ್ದೇಶ ಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ ಎಂದು ಕಿರಿಯ ಅಭಿಯಂತರರು ಮುಖ್ಯಾಧಿಕಾರಿಯವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಸ್ವತಃ ಕಿರಿಯ ಅಭಿಯಂತರದ್ದೆ ಜವಾಬ್ದಾರಿ ಎಂಬಂತೆ ನಿರ್ಲಕ್ಷ ತೋರಲಾಗಿತ್ತು. ಸಭೆಯ ಸಂದರ್ಭದಲ್ಲಿ ದೂರು ನೀಡಿದ ಮಹಿಳಾ ಕಿರಿಯ ಅಭಿಯಂತರಯನ್ನೇ ತರಾಟೆಗೆ ತೆಗೆದುಕೊಂಡ ಯೋಜನಾ ನಿರ್ದೇಶಕ ಸುಬ್ರಮಣ್ಯ ಸೆಟ್ಟಿ ಏಕವಚನದಲ್ಲಿ ಬೈದು ನಿಂದಿಸಿ ಅಪಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾತ್ರಿ 8.30 ಆದರೂ ಮನೆಗೆ ಬಾರದ ಫೋನ್ ಕಾಲ್ ಉತ್ತರ ಬರದೇ ಇದ್ದಾಗಕೆಲವೊಂದು ಮಹಿಳಾ ಸಿಬ್ಬಂದಿಯ ಕುಟುಂಬಸ್ಥರು ಪುರಸಭೆಗೆ ಬಂದಾಗ ಸಭೆ ನಡೆಯುತ್ತಿರುವುದು ಕಂಡು ಬಂತು ರಾತ್ರಿ ಸಮಯದಲ್ಲಿ ಪುರಸಭೆ ಬಾಗಿಲು ತೆರೆದೇ ಇದೆ ಕಚೇರಿ ವಿದ್ಯುತ್ ದೀಪಗಳು ಉರಿಯುತ್ತಿರುವುದನ್ನು ಕಂಡು ಸಾರ್ವಜನಿಕರು, ಪತ್ರಕರ್ತರೊಬ್ಬರು ಕಚೇರಿಗೆ ಹೋದಾಗ ಕೂಡಲೇ ಸಭೆ ಮುಗಿಸಿ ತಮ್ಮ ತಮ್ಮ ಸರಕಾರಿ ವಾಹನಗಳಲ್ಲಿ ಹೊರಟುಹೋದರೆ ದೂರದ ಊರಿಗೆ ಹಳ್ಳಿಗಳಿಗೆ ಹೋಗಬೇಕಾಗಿದ್ದ ಸಿಬ್ಬಂದಿಗಳು ಬಸ್ಸು ಗಳಿಲ್ಲದೆ ಪರದಾಡುತ್ತಿದ್ದರು. ಸೂಕ್ತ ವ್ಯವಸ್ಥೆ ಮಾಡಬೇಕಿದ್ದ ಮುಖ್ಯಾಧಿಕಾರಿ,ಯೋಜನಾ ನಿರ್ದೇಶಕರು ಸರ್ಕಾರಿ ವಾಹನಗಳಲ್ಲಿ ನಿಶ್ಚಿoತೆಯಾಗಿ ಮನೆ ಸೇರಿದರು. ಪುರಸಭೆಯ ಮಹಿಳಾ ಸಿಬ್ಬಂದಿಗಳ ಪರಿಸ್ಥಿತಿ ಕಂಡು ಸಾರ್ವಜನಿಕರು ವ್ಯವಸ್ಥೆ ಮಾಡಿ ಮನೆ ತಲುಪುವoತಾಯಿತು.
ಈ ಹಿಂದೆಯೂ ಹಲವಾರು ಬಾರಿ ಪುರಸಭಾ ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳನ್ನು ಹಲವಾರು ಬಾರಿ ತಮ್ಮಕಛೇರಿಗೆ ಕರೆಸಿ ಬೈದು ನಿಂದಿಸುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ್ರಹವು ಸಿಬ್ಬಂದಿಗಳ ಹಾಗೂ ಅವರ ಕುಟುಂಬಸ್ಥರಿಂದ ಕೇಳಿ ಬರುತ್ತಿದೆ.