ಉಡುಪಿ : ತುಮಕೂರಿನಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್’ವಾದ ಇದರ ಸರ್ವ ಸದಸ್ಯರ ಮಹಾ ಅಧಿವೇಶನದಲ್ಲಿ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ರಾಜ್ಯ ಸಂಘಟನಾ ಸಂಚಾಲಕರಾಗಿ ಸುಂದರ್ ಮಾಸ್ಟರ್ ಆಯ್ಕೆ ಆಗಿದ್ದಾರೆ.
ಸುಂದರ್ ಮಾಸ್ಟರ್ ಅವರು ಉಡುಪಿಯಲ್ಲಿ ದಲಿತ ಚಳುವಳಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದಲ್ಲದೆ ದಲಿತ ಸಂಘಟನೆಯನ್ನು ಮುನ್ನಡೆಸಿಕೊಂಡು ಬಂದಿರುವ ಅವರು ಉಡುಪಿ ಜಿಲ್ಲೆಯ ದಲಿತ ನಾಯಕ ಹಾಗೂ ಪ್ರಗತಿಪರ ಹೋರಾಟಗಾರರಲ್ಲಿ ಓರ್ವರು ಎಂದೇ ಪರಿಚಿತರಾಗಿ ಉಡುಪಿ ಜಿಲ್ಲೆಯ ಶೋಷಿತ ಸಮುದಾಯದ ಗಟ್ಟಿ ಧ್ವನಿಯಾಗಿದ್ದಾರೆ.






































