ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Picture of RB NEWS

RB NEWS

Bureau Report

ಮುನಿಯಾಲು : ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲೆಯಿಂದ ಭಾಗವಹಿಸಿದ 20 ವಿದ್ಯಾರ್ಥಿಗಳ ಪೈಕಿ 7 ನೇ ತರಗತಿಯ ಧನುಷ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಕಲಾ ವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

4 ನೇ ತರಗತಿಯ ಆಯುಷ್ ಕೆ.ಎಸ್ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಕಲಾ ವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದು ಪ್ರಮಾಣ ಪತ್ರ, ಮೆಡಲ್ ಹಾಗೂ ಕ್ರಾಫ್ಟ್ ಕಿಟ್ ಪಡೆದಿದ್ದು ಶಾಲಾ ಹಾಗೂ ಎಸ್ ಡಿ ಎಂ ಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಭಾಗವಹಿಸಿದ ಉಳಿದ ಎಲ್ಲಾ 18 ವಿದ್ಯಾರ್ಥಿಗಳು ಕಲಾ ಭೂಷಣ ಪ್ರಶಸ್ತಿ ಪಡೆದು ಪ್ರಮಾಣ ಪತ್ರ ಹಾಗೂ ಕ್ರಾಫ್ಟ್ ಕಿಟ್ ಪಡೆದಿರಿತ್ತಾರೆ.

ಆ ಮುಖೇನ ಶಾಲೆಯ ಹಾಗೂ ಊರಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. ಜೊತೆಗೆ ವಿದ್ಯಾರ್ಥಿಗಳನ್ನು ಚಿತ್ರಕಲಾ ಸ್ಪರ್ಧೆಗೆ ಸಂಘಟಿಸಲು ಶಾಲಾ ಮುಖೋಪಾಧ್ಯಾಯ ಹರೀಶ್.ಪೂಜಾರಿ.ಎಸ್ ರವರಿಗೆ ಕಲಾ ಪೋಷಕ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ, ಸಂಘಟನಾ ಶಿಕ್ಷಕಿ ಶಾಲಿನಿ ಸುಕುಮಾರ್ ಆಚಾರ್ಯರವರಿಗೆ ಸಹ-ಸಂಘಟನಾ ಶಿಕ್ಷಕ ಪ್ರಶಸ್ತಿ ಪ್ರಮಾಣಪತ್ರ ಹಾಗೂ ಸ್ಮರಣಿಕೆ ಪಡೆದಿದ್ದು, ಶಾಲೆಗೆ “ಉತ್ತಮ ಕಲಾ ಶಾಲೆ” ಪ್ರಶಸ್ತಿ ಲಭಿಸಿದೆ.

ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ರವಿ ಶೆಟ್ಟಿರವರು ನೀಡಿ ಗೌರವಿಸುತ್ತಾ ಮುಂದೆಯೂ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಇನ್ನಷ್ಟು ಸಾಧನೆ ಮಾಡುವಂತೆ ಮಾರ್ಗದರ್ಶನ ಸದಾ ಮುಂದುವರೆಯಲಿ ಎಂದು ಶುಭ ಹಾರೈಸಿರುತ್ತಾರೆ.

ಈ ಸಂದರ್ಭದಲ್ಲಿ ಶಾಲಾ ಅತಿಥಿ ಶಿಕ್ಷಕವೃಂದದವರಾದ ಶೋಭಾ,ಸುರೇಖ, ಗೌರವ ಶಿಕ್ಷಕರಾದ ಸುದರ್ಶನ್,ಭಾವನಾ,ಸುಜಾತ ರವರು , ಎಸ್ ಡಿ ಎಂ ಸಿ ಸದಸ್ಯೆ ಸವಿತಾ ಶೆಟ್ಟಿ ಹಾಗೂ ಅಡುಗೆ ಸಿಬ್ಬಂದಿಗಳಾದ ಪುಷ್ಪ ಮತ್ತು ಸವಿತಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top