ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸದಾಶಿವ ನಿಧನ
ಮಂಗಳೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ, ಕಾರ್ಕಳ ನಗರದ ಮಠದಬೆಟ್ಟು ನಿವಾಸಿ ಕೆ.ಸದಾಶಿವ ( 93) ವಯೋಸಹಜವಾಗಿ ನಿಧನ ಹೊಂದಿದ್ದಾರೆ.
ತೆಳ್ಳಾರು ಶಾಲೆಯಲ್ಲಿ ಹಲವು ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದ ಕೆ.ಸದಾಶಿವ ಅವರು ಸಮಾಜ ಮುಖಿ ಸತ್ಕಾರ್ಯ ನಡೆಸುವ ಮೂಲಕ ಜನಮನ್ನಣೆಗೂ ಪಾತ್ರರಾಗಿದ್ದರು.
1984ರಲ್ಲಿ ಮುಖ್ಯಮಂತ್ರಿ ಗುಂಡೂರಾವ್ ಶಿಕ್ಷಣ ಸಚಿವೆ ನಾಗಮ್ಮ ಕೇಶವಮೂರ್ತಿ ಇವರಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಪಾತ್ರರಾಗಿದ್ದರು.
ಕಾರ್ಕಳ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ, ಹೋಗಾಡ್೯ನ ಘಟಕಾ ಅಧ್ಯಕ್ಷರಾಗಿ, ಶ್ರೀ ದೇವಿ ಕಲಾ ಆಟ್ಸ್೯ ಸ್ಥಾಪಕರಲ್ಲಿ ಓರ್ವರಾಗಿಯೂ ಇತರ ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕವಾಗಿಯೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದರು.
ಪತ್ನಿ ಜಲಜಾ ಸ್ಮರಣಾರ್ಥ ವಾಗಿ ಪೆರ್ವಾಜೆ ಬಿಲ್ಲವ ಸಂಘದಲ್ಲಿ ಬಯಲು ರಂಗಮಂಟಪ ನಿರ್ಮಿಸಿ ಸಂಘಕ್ಕೆ ಉದಾರತೆಯಾಗಿ ನೀಡಿದ್ದರು.
ರವಿವಾರ ರಾತ್ರಿ 8.00 ಗಂಟೆಗೆ ಮಂಗಳೂರು ಉರ್ವಾಸ್ಟೋರ್ ನಲ್ಲಿ ಇರುವ ಮಗ ಡಾ. ಅಶ್ವಥ್ ಅವರ ಮನೆಯಲ್ಲಿ ಕೆ.ಸದಾಶಿವ ಅವರು ಕೊನೆಉಸಿರೆಳೆದಿದ್ದಾರೆ.
ಪುತ್ರಿ ಆಶಾ ಮುಂಬಯಿ, ಪುತ್ರರಾದ ಅರುಣ್ ಕುಮಾರ್ ಇಂಜಿನಿಯರ್ ಕೆನಡಾ ಡಾ. ಅಶ್ವಥ್ ಉರ್ವಾಸ್ಟೋರ್ ಮಂಗಳೂರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮಂಗಳೂರಿನಲ್ಲಿ ಅಂತ್ಯಕ್ರಿಯೆ
ಸದಾಶಿವ .ಕೆ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 4.30 ಗಂಟೆಯ ವೇಳೆಗೆ ಮಂಗಳೂರಿನ ಉರ್ವಾಸ್ಟೋರಿನಲ್ಲಿ ಮಗ ಡಾ.ಅಶ್ವಥ್ ಅವರ ಮನೆಯಲ್ಲಿ ನಡೆಸಲು ಮನೆಮಂದಿ ಹಾಗೂ ಕುಟುಂಬಸ್ಥರು ನಿರ್ಧರಿಸಿದ್ದಾರೆ.
Flat no.308
DATTA PARADISE,
Near St.Dominic church,
KODIKAL ROAD,
URVASTORE,
MANGALORE -575006
Phone
9845633933
9945990912


































