ರಾಜ್ಯ ಕಾಂಗ್ರೆಸ್‌ ಸರ್ಕಾರದ ಓಲೈಕೆ ನೀತಿಯ ವಿರುದ್ಧ ಜನರು ಸ್ವಯಂಪ್ರೇರಿತರಾಗಿ ಧ್ವನಿಯೆತ್ತಬೇಕು -ಶಾಸಕ ವಿ . ಸುನಿಲ್‌ ಕುಮಾರ್‌

Picture of RB NEWS

RB NEWS

Bureau Report

ಬೆಳ್ಮಣ್ ಶ್ರೀಕೃಷ್ಣ ಸಭಾಭವನದಲ್ಲಿ ನಡೆದ ಬೆಳ್ಮಣ್ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರ ಜನಪ್ರತಿನಿಧಿಗಳ ಹಾಗೂ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಬೇಜವಾಬ್ದಾರಿತನದ ಸರಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಕಳ್ಳರಿಗೆ, ದರೋಡೆಕೋರರಿಗೆ ರಹಧಾರಿ ನಿರ್ಮಾಣವಾಗಿದೆ. ಬಡವರು ಮನೆ ಕಟ್ಟಲು ಬೇಕಾದ ಪರವಾನಿಗೆಗಾಗಿ ಸರ್ಕಾರಿ ಕಛೇರಿಗಳನ್ನು ಅಲೆದು ಸುಸ್ತಾದರೂ ಪರವಾನಿಗೆ ಸಿಗುತ್ತಿಲ್ಲ. ಜೊತೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 5000 ಬಡಜನರ ರೇಷನ್ ಕಾರ್ಡ್ ರದ್ದಾಗಲು ಶಿಫಾರಸ್ಸುಗೊಂಡಿದೆ. ಹಾಲಿನ ದರ ಏರಿಕೆಯಾದರೂ, ಕಳೆದ ಒಂದು ವರ್ಷದಿಂದ ರೈತರಿಗೆ ಸಿಗುತ್ತಿದ್ದ ಹಾಲಿನ ಸಬ್ಸಿಡಿ ಸಿಗುತ್ತಿಲ್ಲ. ಈ ಸರ್ಕಾರದ ಓಲೈಕೆ ನೀತಿಯಿಂದಾಗಿ ರಾಜ್ಯದೆಲ್ಲೆಡೆ ದರೋಡೆ,ಸುಲಿಗೆ,ಅತ್ಯಾಚಾರ ನಡೆಯುತ್ತಿದ್ದು ಎಲ್ಲೆಡೆ ಅರಾಜಕತೆ ಸೃಷ್ಟಿಯಾಗಿದೆ. ಇದರ ವಿರುದ್ಧ ಜನರು ಸ್ವಯಂಪ್ರೇರಿತವಾಗಿ ದಂಗೆ ಏಳಬೇಕಾದಂತಹ ಪರಿಸ್ಥಿತಿ ಬಂದಿದೆ ಎಂದು ಸರಕಾರದ ವಿರುದ್ಧ ಆಕ್ರೋ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಸಾಲ್ಯಾನ್‌,ವಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ ಪ್ರಮುಖರಾದ ಸೂರ್ಯಕಾಂತ್ ಶೆಟ್ಟಿ, ಶಂಕರ್ ಕುಂದರ್, ಮುಲ್ಲಡ್ಕ ರವೀಂದ್ರ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದೇವೇಂದ್ರ ಶೆಟ್ಟಿ ಮಂಡಲ ಪ್ರಧಾನಕಾರ್ಯದರ್ಶಿ ಸತೀಶ್ ಪೂಜಾರಿ  ಮೊದಲಾದವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top