ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ: ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ
ಕಾರ್ಕಳ: ಕಾರ್ಕಳ ಶಾಸಕ ವಿ.ಸುನೀಲ್ಕುಮಾರ್ ನೇತೃತ್ವದಲ್ಲಿ ಫೆ.06ರಂದು ಕಾರ್ಕಳ ತಾಲೂಕು ಕಚೇರಿಯ ಮುಂಭಾಗದಲ್ಲಿ ರಾಜ್ಯ ಸರಕಾರದ ಭ್ರಷ್ಟ ಆಡಳಿತ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದಿನಬಳಕೆ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಬೆಲೆ ಏರಿಕೆಯಿಂದ ಜನಜೀವನದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ರಾಜ್ಯದಲ್ಲಿ ರಸ್ತೆ, ನೀರು,ಶಾಲಾ ಕಟ್ಟಡ ಹಾಗ ಇತರ ಅಭಿವೃದ್ಧಿಗಾಗಿ ಯಾವುದೇ ಅನಿದಾನವನ್ನು ಬಿಡುಗಡೆಗೊಳಿಸುತ್ತಿಲ್ಲ. ಮತಾಂಧರ ಅಟ್ಟಹಾಸ ಹಾಗೂ ಅವರ ಓಲೈಕೆ ಹಿಂದೂ ಹಬ್ಬಗಳಲ್ಲಿ ಮತಾಂಧರರಿAದ ಗಲಭೆ ಸೃಷ್ಠಿ, ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಅನುದಾನ ನೀಡದೇ ವಕ್ಫ್ ಮಂಡಳಿಗೆ ಅನುದಾನದ ಕೊಡುಗೆಯಾಗಿ ನೀಡುತ್ತಿದೆ. ಪ್ರಾಕೃತಿಕವಾಗಿ ದೊರೆಯುವಂತಹ ಕೆಂಪುಕಲ್ಲು ಹಾಗೂ ಮರಳು ಪೊರೈಕೆಗೆ ಸರಿಯಾದ ನೀತಿಗಳನ್ನು ಮಾಡದೇ ಎಲ್ಲದಕ್ಕೂ ತಡೆಯೊಡ್ಡಿ ಕೃತಕ ಅಭಾವ ಸೃಷ್ಠಿಸಿದೆ. ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿ ತಡೆಯಾಗಿದೆ. ಬಡವರ ಕುಡುಂಬಗಳು ವಿದ್ಯಾಭ್ಯಾಸ ಹಾಗೂ ಆರೋಗ್ಯ ಭದ್ರತೆ ದೃಷ್ಠಿಯಲ್ಲಿ ಅನುಕೂಲವಾಗುತ್ತಿದ್ದ ಅನೇಕ ಬಿಪಿಎಲ್ ಕಾರ್ಡ್ ಗಳನ್ನು ವಿವಿಧ ನೆಪಗಳನ್ನು ನೀಡಿ ರದ್ದು ಮಾಡುತ್ತಿದೆ. ಹಾಲಿನ ದರ ಏರಿಕೆ ಮಾಡಿದರೂ ರೈತರಿಗೆ ನೀಡಬೇಕಾದ 900 ಕೋಟಿಗೂ ಅಧಿಕ ಸಬ್ಸಿಡಿಯನ್ನು ಬಾಕಿ ಉಳಿಸಿಕಕೊಂಡಿದೆ. ಇದರಿಂದಾಗಿ ಹೈನುಗಾರಿಕೆಯು ರೈತರ ಕೈಗಳನ್ನು ಸುಡುತ್ತಿದೆ. ವಿವಿಧ ನೆಪಗಳಲ್ಲಿ ನೀಡಿಶೇ. 90 ರಷ್ಟು ಅಕ್ರಮ ಸಕ್ರಮ ಅರ್ಜಿಗಳನ್ನು ಅನರ್ಹ ಎಂದು ಗುರುತಿಸಿ ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸದೇ, ಅಧಿಕಾರಿಗಳ ಹಂತದಲ್ಲಿಯೇ ತರಾತುರಿಯಲ್ಲಿ ತಿರಸ್ಕರಿಸಲಾಗುತ್ತಿದೆ. ಕರಾವಳಿ ಭಾಗದಲ್ಲಿ ಒಂದು ಎಕ್ರೆ ವರೆಗಿನ ಏಕ ನಿವೇಶನ ವಿನ್ಯಾಸಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ಕಠಿಣಗೊಳಿಸಿ, ಮನೆ ಕಟ್ಟಲು ಕಾದು ಕುಳಿತ ಜನರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದು ಕಾರ್ಕಳ ಬಿಜೆಪಿ ಆರೋಪಿಸಿದೆ.
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಶಾಲಿಯಾಗಿ ಮಾಡುವ ಕಾರ್ಯತಂತ್ರಕ್ಕೆ ಶಾಸಕ ಸುನೀಲ್ ಕುಮಾರ್ ಮುಂದಾಗಿದ್ದಾರೆ. ಆ ಪ್ರಯುಕ್ತ ಕಳೆದ ಒಂದು ತಿಂಗಳುಗಳಿoದ ಗ್ರಾಮ ಮಟ್ಟಗಳಲ್ಲಿ ಸಭೆಗಳನ್ನು ಆಯೋಜಿಸಿ ಪ್ರತಿಭಟನೆಗೆ ಅಗಮಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಕರಾತ್ಕಕ ಸ್ಪಂದನೆ ದೊರೆತ್ತಿದೆ. ಪ್ರತಿಭಟ ಸಭೆಯ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿ ಮುಂಬರುವ ತಾಲೂಕು ಪಂಚಾಯತ್ , ಜಿಲ್ಲಾ ಪಂಚಾಯತ್ ಹಾಗೂ ಪುರಸಭೆಯ ಚುನಾವಣೆಗಳನ್ನು ಎದುರಿಸಲು ಸರ್ವ ಸನ್ನದ್ಧ ರೀತಿಯದಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.






































