ಕಾರ್ಕಳ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮಾತು ಪ್ರದರ್ಶನ ಕಾಲೇಜುಗಳ ವಿಶ್ವವಿದ್ಯಾನಿಲಯ, ಮೈಸೂರು 2024 ನೇ ಸಾಲಿನ ಭರತನಾಟ್ಯ ಹಿರಿಯ ವಿಭಾಗದಲ್ಲಿ ಅನ್ವಿತಾ ಮುಗೇರಾಯ ರಾಜ್ಯಮಟ್ಟದಲ್ಲಿ 3ನೇ ಶ್ರೇಣಿ ಪಡೆದಿದ್ದಾಳೆ. ಕಾರ್ಕಳ ರವಿಶಂಕರ್ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ವಿದ್ವಾನ್ ಸುಬ್ರಮಣ್ಯ ನಾವುಡನವರ ಶಿಷ್ಯೆ, ವಕೀಲ ಶ್ರೀ ಹರಿ ಮುಗೇರಾಯ ಮಗಳು ಆಗಿದ್ದಾಳೆ.

































