ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ
ರಾಯಚೂರು ಆ. 19 : ಕಲಾ ಸಂಕುಲ ಸಂಸ್ಥೆ ( ರಿ ) ರಾಯಚೂರು ವತಿಯಿಂದ ಸೆಪ್ಟಂಬರ್ 8 ರಂದು ರಂಗಮಂದಿರದಲ್ಲಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕರಿಗೆ ಶಿಕ್ಷಕರ ರತ್ನ ಪ್ರಶಸ್ತಿ ಮತ್ತು ಉತ್ತಮ ಶಾಲೆಗಳಿಗೆ ಬೆಸ್ಟ್ ಸ್ಕೂಲ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಆಸಕ್ತ ಶಿಕ್ಷಕ,ಶಿಕ್ಷಕಿಯರು ಮತ್ತು ಉತ್ತಮ ಶಾಲೆಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಯವರು ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳು 28 ರಂದು ಕೊನೆಯ ದಿನವಾಗಿರುತ್ತದೆ.
ವಾಟ್ಸಪ್ ಮೂಲಕ ತಮ್ಮ ಸ್ವ ವಿವರವನ್ನು ಕಳುಹಿಸಬಹುದು ಮೊಬೈಲ್ ನಂ 9448777383 ಕಳುಹಿಸಿಕೊಡಬೇಕು.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಮಂಗಳೂರಿನ ಕಿತ್ತಳೆ ಹಣ್ಣು ಮಾರಿ ಸರ್ಕಾರಿ ಶಾಲೆ ಕಟ್ಟಿರುವ ಪುಣ್ಯಾತ್ಮ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬನವರು ಆಗಮಿಸಲಿದ್ದಾರೆ ಎಂದು ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾದ ರೇಖಾ ಬಡಿಗೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






































