ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧ:ಪತನಕ್ಕೆ ಸನ್ನಿಹಿತ: ಶಾಸಕ ವಿ.ಸುನೀಲ್ ಕುಮಾರ್

Picture of RB NEWS

RB NEWS

Bureau Report

ಕಾರ್ಕಳ: ಜನಪರ ಆಡಳಿತ ನಡೆಸಲು ವಿಫಲವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರವು 22 ಲಕ್ಷ ರೇಷನ್ ಕಾರ್ಡ್,12 ಲಕ್ಷ ಬಗರ್ ಹುಕುಂ ಜಮೀನು ತಿರಸ್ಕರಿಸಲು ಮುಂದಾಗಿದೆ. ಜನಜೀನವದ ಮೇಲೆ ಕರಿಛಾಯೆ ಮೂಡಿದ ಪರಿಣಾಮವಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿ ಸಾಲಗಾರರಾಗಿರುವುದರಿಂದ ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಾಟ ತಾಂಡವವಾಡುತ್ತಿದ್ದು, ಹಲವು ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾಗಿದೆ. ರಾಜ್ಯ ಸರಕಾರದ ದುರಾಡಳಿತದ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ಧ್ವನಿ ಎತ್ತಿದ್ದು ಮುಂದೆ ರಾಜ್ಯದಲ್ಲಿ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಯಲಿದೆ ಆ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರವು ಅಧ:ಪತನ ವಾಗಲಿದೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

ಕಾರ್ಕಳ ತಾಲೂಕು ಕಚೇರಿಯ ಮುಂಭಾಗದಲ್ಲಿ ರಾಜ್ಯ ಸರಕಾರದ ಭ್ರಷ್ಟ ಆಡಳಿತ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರೋದು ಸಂವೇದನಾಶೀಲತೆ ಇಲ್ಲದ ಭಂಡ ಸರಕಾರ, ದುಡಿಯುವ ಕೈಗಳಿಗೆ ಕೆಲಸ ನೀಡದ ಪರಿಣಾಮವಾಗಿ ಸರಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಎಲ್ಲೆಮೀರಿದೆ. ನಿರುದ್ಯೋಗಿ ಕಾಂಗ್ರೆಸ್ ಕಾರ್ಯಕರ್ತರು ಮಧ್ಯವರ್ತಿಗಳಾಗಿ ಬೀಡುಬಿಟ್ಟಿದ್ದಾರೆ. ಹಾಗಾಗಿ ನೇರವಾಗಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಅರ್ಜಿದಾರನಿಗೆ ಯಾವುದೇ ಕೆಲಸವಾಗಬೇಕಾದರೆ ಮಧ್ಯವರ್ತಿಗೆ ಲಂಚ ನೀಡಬೇಕು. ಸರಕಾರದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಸಂಬAಧಪಟ್ಟ ಯಾವುದೇ ಪರಿಕರಗಳು ವಸ್ತುಗಳು ಓಪನ್ ಮಾರ್ಕೆಟ್‌ನಲ್ಲಿ ಸಿಗುತ್ತಿಲ್ಲ. ಕಳ್ಳದಂಧೆಯಲ್ಲಿ ಹೆಚ್ಚುವರಿ ಮೊತ್ತ ಪಾವತಿಸಿ ಜನಸಾಮಾನ್ಯ ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದರು.
ಬಿಡ್ ಕಾಯಿನ್ ಜಾಲದಲ್ಲಿ ಯುತ್ ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷನೇ ಸಿಲುಕಿಕೊಂಡಿದ್ದಾನೆ. ಈ ಕುರಿತು ಆರಂಭದಲ್ಲಿ ತೀವ್ರ ವಿಚಾರಣೆ ಮಾಡದೇ ಇರುವುದಕ್ಕೆ ಕಾರಣವಾದರೂ ಏನೆಂದು ಪ್ರಶ್ನಿಸಿದ ಅವರು ಆ ಹಣ ಚುನಾವಣೆಗೆ ಹೋಗಿದೆ ಎಂಬ ಕಾರಣಕ್ಕೆ ಸಾಫ್ಟ್ ಕಾರ್ನರ್ ತೋರಿರಬಹುದೇ ಎಂದು ಅವರು ಪ್ರಶ್ನಿಸಿದರು.


ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ರಾಜ್ಯ ಸರಕಾರ ದಿವ್ಯ ನಿರ್ಲಕ್ಷö್ಯ ತೋರುತ್ತಾ ಬಂದಿದೆ. ಮಲತಾಯಿ ಧೋರಣೆ ಕ್ರಮದ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಅವರು 2023-24 ರಲ್ಲಿ ಭಾರಿಮಳೆ ಹಾನಿ ಸಂಭವಿಸಿದಾಗ ಮೂರು ಜಿಲ್ಲೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೇಟಿಕೊಟ್ಟು ಸಭೆ ನಡೆಸಿದ್ದರು. ಆಗ ಶಾಸಕನ ನೆಲೆಯಲ್ಲಿ ಹರ್ಷಗೊಂಡಿದೆ. ಆದರೆ ಅವರು ಬರೀ ಸಭೆಯನ್ನಷ್ಟೇ ನಡೆಸಿ ಹೊರಟು ಹೋಗಿದ್ದಾರೆ. ಚಿಕ್ಕಾಸು ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರಕಾರದ ಎರಡು ವರ್ಷ ಆಳ್ವಿಕೆಯಲ್ಲಿ ನೂತನವಾದ ಒಂದೇ ಒಂದು ಕಾಲು ಸೇತುವೆ ನಿರ್ಮಾಣವಾಗಿಲ್ಲ. 9/11 ತಾಲೂಕಿನಲ್ಲಿ ಸುಮಾರು 600 ಕ್ಕೂ ಅಧಿಕ ಅರ್ಜಿಗಳು ಬಾಕಿಯಿದ್ದು ಬಡವರು ಮನೆ ಕಟ್ಟಲು ಆಗುತಿಲ್ಲ. ಇಷ್ಟಾದರೂ ಕಾಂಗ್ರೆಸ್ ಮುಖಂಡರು ಮಾತ್ರ ಗ್ಯಾರೆಂಟಿ ಯೋಜನೆಯನ್ನೇ ತಮ್ಮ ಅಸ್ತçವಾಗಿ ಬಳಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಾರ್ಕಳದಲ್ಲಿ ನಡೆಯುತ್ತಿರುವ ಬೃಹತ್ ಹೋರಾಟವು ರಾಜ್ಯಕ್ಕೆ ಹೊಸ ದಿಕ್ಸೂಚಿಯಾಗಲಿದೆ. ಬಡಜನರು ಮೈಕ್ರೋ ಫೈನಾನ್ಸ್ ಸಾಲಗಾರರ ಕಾಟಕ್ಕೆ ಬೆದರಿ ಗ್ರಾಮ ತೊರೆದಿದ್ದಾರೆ. ಈ ಬೆಳವಣಿಗೆ ಸರಕಾರಕ್ಕೆ ನಾಚಿಕೆಗೇಡಿನ ವಿಷಯವಾಗಿದೆ. ಚುನಾವಣೆಯ ಭರದಲ್ಲಿ ಕಾಂಗ್ರೆಸ್ ಸರಕಾರ ಹತ್ತು ಕೆ.ಜಿ ಅಕ್ಕಿ ಕೊಡ್ತೇವೆ ಎಂದು ಹೇಳಿತ್ತು. ಕರ್ನಾಟಕ ಸರ್ಕಾರದಿಂದ ಒಂದು ಕಾಳು ಕೊಟ್ರಾ? ಕೇಂದ್ರ ದಿಂದ 5 ಕೆಜಿ ಅಕ್ಕಿ ನೀಡುತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ವರ್ಷಗಳಿಂದ ಎಲ್ಲಾ ಇಲಾಖೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಗ್ರಾಮ ಪಂಚಾಯತಿ ಗಳ ಅನುದಾನಗಳಿಗು ಎಲ್ಲಾವೂ ಕತ್ತರಿ ಹಾಕಲಾಗಿದೆ. ಬಿಜೆಪಿ ಸರಕಾರ ವಿದ್ದಾಗ ಪ್ರತಿ ಗ್ರಾಮಗಳಿಗ 12 ಕೋಟಿ ಅನುದಾನವನ್ನು ಗ್ರಾಮಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರ ದಲ್ಲಿ ಎರಡು ವರ್ಷದಲ್ಲಿ ಒಟ್ಟು ತಾಲೂಕಿಗೆ 12 ಕೋಟಿ ನೀಡಿದ್ದಾರೆ ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು. .ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬಿಜೆಪಿ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, , ಬಿಜೆಪಿ ರೇಶ್ಮಾ ಉದಯ ಶೆಟ್ಟಿ , ಜಿಲ್ಲಾ ಉಪಾಧ್ಯಕ್ಷ ರಾದ ಮಹಾವೀರ ಹೆಗ್ಡೆ, ಬೋಳ ಶ್ರೀನಿವಾಸ ಕಾಮತ್, ಮಣಿರಾಜ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ,ಕಾರ್ಕಳ ಮಾಜಿ ತಾ.ಪಂ ಉಪಾಧ್ಯಕ್ಷ ಹರೀಶ್ ನಾಯಕ್, ಲಕ್ಷ್ಮೀ ನಾರಾಯಣ ಕನ್ಯಾನ ,ಗುರ್ಮೇ ಸುರೇಶ್ ಶೆಟ್ಟಿ, ಇರ್ವತ್ತೂರು ಉದಯ ಕೋಟ್ಯಾನ್, ಸಾಣೂರು ಯುವರಾಜ್ ಜೈನ್, ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಉದಯ ಹೆಗ್ಡೆ, ವಿಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸರಕಾರದ ಜನವಿರೋಧಿ ನೀತಿಯ ವಿರುದ್ಧ ದ ಹಾಡನ್ನು ಹಾಡಿ ಘೋಷಣೆ ಕೂಗಿದರು.
ಕುಕ್ಕುಂದೂರು ರವೀಂದ್ರ ಮಡಿವಾಳ ಸ್ವಾಗತಿಸಿದರು, ಸುಹಾಸ್ ಶೆಟ್ಟಿ ಮುಟ್ಲುಪಾಡಿ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top