ರಾಜಕೀಯ ತೆವಳಿಗಾಗಿ ಅಂಗನವಾಡಿ ಕಾರ್ಯಕರ್ತೆ ಬಲಿಪಶು!
ಕಾರ್ಕಳ: ನಿಮ್ಮ ನಾಯಕ ಉದಯ್ ಕುಮಾರ್ ಶೆಟ್ಟಿಯವರು ತನ್ನ ರಾಜಕೀಯ
ತೆವಲಿಗೋಸ್ಕರ ಒಬ್ಬ ಅಮಾಯಕ ಅಂಗನವಾಡಿ ಕಾರ್ಯಕರ್ತೆಯನ್ನ ಬಲಿಪಶು ಮಾಡಿದಕ್ಕೆ ನಿಮ್ಮ ನಾಯಕನಿಗೆ ನೀವೇನು
ಶಿಕ್ಷೆ ಕೊಡುತ್ತೀರಿ ಎಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಅವರಿಗೆ ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪ್ಪಾಡಿ ಸವಾಲು ಹಾಕಿದ್ದಾರೆ.
ಗಣಹೋಮ ನಡೆಸಿ ಧಾರ್ಮಿಕತೆ ಮೆರೆದ ಅಂಗನವಾಡಿ ಕಾರ್ಯಕರ್ತೆಗೆ ಶಾಸಕರ ಒತ್ತಡದ ಮೇಲೆ ಅಮಾನತ್ತಿನ
ಶಿಕ್ಷೆಯಾದರೆ, ಅನುದಾನ ಇಲ್ಲದೇ ಕಾಮಗಾರಿ ಗುದ್ದಲಿ ಪೂಜೆ ಮಾಡಿದ ಶಾಸಕರಿಗೆ ಯಾವ ಶಿಕ್ಷೆ ಆಗಬೇಕೆಂದು ಪ್ರಶ್ನಿಸಿದ
ಕಾಂಗ್ರೆಸ್ ವಕ್ತರರಾದ ಶುಭದ್ ರಾವ್ ಅವರಿಗೆ ನೇರ ಉತ್ತರ ನೀಡದ ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಮುಟ್ಲುಪ್ಪಾಡಿ ಪ್ರಶ್ನೆಗೆ ಪ್ರಶ್ನೆಯಿಂದಲೇ
ಅಷ್ಟಕ್ಕೂ ಸರ್ಕಾರಿ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡಲು ಕಾರ್ಕಳ ಕಾಂಗ್ರೆಸ್ನ ಪರಾಜಿತ
ಅಭ್ಯರ್ಥಿ ಮುನಿಯಾಲು ಉದಯ್ ಶೆಟ್ಟಿ ಯಾರು? ಈ ಹಿಂದೆಯೂ ಸರ್ಕಾರಿ ಕಛೇರಿಗಳಿಗೆ ತೆರಳಿ ತಾನೇ ಜನಪ್ರತಿನಿಧಿ
ಎಂಬ ರೀತಿಯಲ್ಲಿ ವರ್ತಿಸುವುದು, ಸಾರ್ವಜನಿಕ ಸರ್ಕಾರಿ ಕಛೇರಿಯಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು
ಈ ಹಿಂದೆಯೂ ಅನೇಕ ಬಾರಿ ನಡೆದಿರುತ್ತದೆ. ಸಾರ್ವಜನಿಕ ವಲಯದಲ್ಲಿ ಇದರ ಬಗ್ಗೆ ಹಾಸ್ಯಾಸ್ಪದ ಚರ್ಚೆಯೂ
ನಡೆದಿರುತ್ತದೆ. ಸುಭದ ರಾವ್ ಅವರೇ, ನೀವು ಒಬ್ಬ ಜನಪ್ರತಿನಿಧಿ. ಮುನಿಯಾಲು ಉದಯ್ ಶೆಟ್ಟಿಯವರಿಗೆ ನೀವೇ
ಕೇಳಬೇಕು. ನೀವೊಬ್ಬ ಜನಪ್ರತಿನಿಧಿಯೋ?? ಸರ್ಕಾರಿ ಕಟ್ಟಡವನ್ನು ಉದ್ಘಾಟನೆ ಮಾಡಲು ನಿಮಗೆ ಯಾವ
ಅರ್ಹತೆಯಿದೆ? ನಿಮ್ಮಿಂದಾಗಿ ಏನೂ ಅರಿಯದ ಅಂಗನವಾಡಿ ಕಾರ್ಯಕರ್ತೆ ಒಬ್ಬರನ್ನು ಬಲಿ ಕೊಟ್ಟಿರಲ್ಲಾ?
ಅದಕ್ಕಾಗಿ ಅಮಾನತಿಗೆ ಒಳಗಾದ ಅಂಗನವಾಡಿ ಕಾರ್ಯಕರ್ತೆಯ ಬಳಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಕ್ಷೇತ್ರದಾದ್ಯಂತ ಎಷ್ಟು ಗುದ್ದಲಿ ಪೂಜೆ ಮಾಡಿದ್ದಾರೆ,
ಎಷ್ಟು ಅಭಿವೃದ್ಧಿ ಯೋಜನೆಗಳನ್ನು ನಡೆಸಿದ್ದಾರೆ ಎಂಬುದು ಇಡೀ ಕಾರ್ಕಳದ ಪ್ರಜ್ಞಾವಂತ ನಾಗರೀಕರಿಗೆ ತಿಳಿದಿದೆ. ನಿಮಗೆ
ತಿಳಿಯದಿದ್ದರೆ ಕೇಳಿ, ರಿಪೋರ್ಟ್ ಕಾರ್ಡ್ ಕೊಡುತ್ತೇವೆ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವೇ
ಕಳೆದರೂ, ಯಾವುದೇ ಅನುದಾನ ಬಿಡುಗಡೆ ಮಾಡದೇ, ಒಂದೇ ಒಂದು ಗುದ್ದಲಿ ಪೂಜೆಯೂ ಮಾಡದ ಕೀರ್ತಿಯು ನಿಮ್ಮ
ಸರ್ಕಾರಕ್ಕೆ ಸಲ್ಲುತ್ತದೆ. ಅಭಿವೃದ್ಧಿ ವಿಷಯದಲ್ಲಿ ನಮ್ಮ ಶಾಸಕರನ್ನು ಪ್ರಶ್ನಿಸುವ ನೈತಿಕತೆ ನಿಮಗಿಲ್ಲ. ನಿಮ್ಮ ಸಾಧನೆ
ಏನಿದ್ದರೂ, ಬಿಜೆಪಿ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳನ್ನು ತಡೆಹಿಡಿದಿರುವುದು ಮಾತ್ರ ಎಂದು ಅವರು ವ್ಯಂಗ್ಯವಾಡಿದ್ದಾರೆ.





































