ರಾಜಕರಣಿಯ ಅಕ್ರಮ ದಂಧೆ ಬಯಲು ಮಾಡಿದ ಪೊಲೀಸರು ! 

Picture of RB NEWS

RB NEWS

Bureau Report

ರಾಜಕರಣಿಯ ಅಕ್ರಮ ದಂಧೆ ಬಯಲು ಮಾಡಿದ ಪೊಲೀಸರು ! 

ಕಾರ್ಕಳ : ರಾಜಕರಣಿ ಕಂ ಬೇನಾಮಿ ಗುತ್ತಿಗೆದಾರರೊಬ್ಬರು ರಾಜರೋಷವಾಗಿ ಬೋಳದಲ್ಲಿ ನಡೆಸುತ್ತಿದ್ದ ಮರಳು ದಂಧೆಗೆ ಗ್ರಾಮಾಂತರ ಠಾಣಾ ಪೊಲೀಸರು  ಬ್ರೇಕ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. 

ಮೇ 19 ರಂದು ಬೆಳಗ್ಗೆ 11:00 ಗಂಟೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಪ್ರಸನ್ನ ಎಂ.ಎಸ್., ಅವರು ಖಚಿತ ವರ್ತಮಾನದ ಮೇರೆಗೆ ಬೋಳ ಇಚ್ಟೋಡಿ ಪರಿಸರದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. 

  ಕೆಲವು ವ್ಯಕ್ತಿಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಹೊಂದದೇ ಠಾಣಾ ಸರಹದ್ದಿನ ಬೋಳ ಗ್ರಾಮದ ಇಟ್ಟೋಡಿ ಎಂಬಲ್ಲಿ ಹರಿಯುವ ಶಾಂಭವಿ ನದಿಯಿಂದ ಮರಳನ್ನು ಅಕ್ರಮವಾಗಿ ಹಿಟಾಚಿ/ಜೆ.ಸಿ.ಬಿ ಅಥವಾ ಯಾವುದೋ ಯಂತ್ರೋಪಕರಣದಿಂದ, ತೆಗೆದು ಕಳವು ಮಾಡಿದ ಮರಳನ್ನು ನದಿ ಮಧ್ಯೆ ರಾಶಿ ಹಾಕಿರುವುದು ಕಂಡುಬಂದಿದೆ. 

 ಬೋಳ ಪರಿಸರದಲ್ಲಿ ಹರಿಯುವ  ಶಾಂಭವಿ ನದಿಯಿಂದ ಮರಳನ್ನು ಕಳವು ಮಾಡಿ ನದಿಯ ಮಧ್ಯೆ ಶೇಖರಿಸಿಟ್ಟಿದ್ದು, ಅದರ‌ ಮೌಲ್ಯ ಸುಮಾರು ರೂ. 40,000  ಅಂದಾಜಿಸಲಾಗಿದೆ. ಒಟ್ಟು 5 ಲೋಡ್ (10 ಯುನಿಟ್) ಮರಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಪ್ರಮುಖ ಪಕ್ಷದ ನೇತಾರ ಕಂ ಬೇನಾಮಿ ಕಂಟ್ರಾಕ್ಟರ್ ದಾರ ಹಾಗೂ ಆತನ ಸಹಚರರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಖಚಿತಗೊಂಡಿದೆ. 

 ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top