ಮಲ್ಪೆ: ರಸ್ತೆ ಅಫಘಾತವೊಂದರಲ್ಲಿ ಮತ್ಸ್ಯ ಉದ್ಯಮಿಯೊಬ್ಬರು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಮಲ್ಪೆಯ ವಡಭಾಂಡೇಶ್ವರ ರಸ್ತೆಯಲ್ಲಿ ಸಂಭವಿಸಿದೆ.
- ಮಲ್ಪೆ ಬೋಟ್ ಮಾಲಕ ಚಂದ್ರ ಎಂದು ತಿಳಿದು ಬಂದಿದೆ.
- ಚಂದ್ರ ಅವರು ಮಲ್ಪೆಯ ಅಮ್ಮಣ್ಣ ಸ್ಟೋರ್ ಅಂಗಡಿಯ ಎದುರು ಮಲ್ಪೆ ವಡಭಾಂಡೇಶ್ವರ ರಸ್ತೆಯಲ್ಲಿ ರಸ್ತೆ ದಾಟುವಾಗ ಅಪರಿಚಿತ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಮಲ್ಪೆ ಪೊಲೀಸರು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



































