ರಘಪತಿ ಭಟ್ ಅವರನ್ನು ಸೆಳೆಯಲು ಮುಂದಾದ ಕೈ ನಾಯಕರು

Picture of RB NEWS

RB NEWS

Bureau Report

ಉಡುಪಿ : ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಪರಾಜಿತ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ. ರಘುಪತಿ ಭಟ್ ಅವರಿಗೆ ಕಾಂಗ್ರೆಸ್ ಸೆಳೆಯಲು ಯತ್ನಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ದೂರವಾಣಿ ಮೂಲಕ ಭಟ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ರಘುಪತಿ ಭಟ್ ಅವರಿಗೆ ಕಾಂಗ್ರೆಸ್ ನಲ್ಲಿ ಉತ್ತಮ ಸ್ಥಾನ ನೀಡುವ ಭರವಸೆ ನೀಡಿದರೆನ್ನಲಾಗಿದೆ.

ಈಗಾಗಲೇ ರಘುಪತಿ ಭಟ್ ಅವರನ್ನು 6 ವರ್ಷ ಕಾಲ ಪಕ್ಷ ಉಚ್ಛಾಟಿಸಿದೆ. ರಘುಪತಿ ಭಟ್ ಅವರೂ ತನ್ನ ಕೊನೆಯುಸಿರು ಇರುವಲ್ಲಿಯ ವರೆಗೂ ಬಿಜೆಪಿಯಲ್ಲಿರುವುದಾಗಿ ಹೇಳಿದ್ದು, ತನ್ನ ಹೆಣದ ಮೇಲೆ ಬಿಜೆಪಿ ಧ್ವಜ ಇರುತ್ತದೆ ಎಂದು ಹೇಳಿರುವುದನ್ನು ಸ್ಮರಿಸಬಹುದು.

ಈ ಮಧ್ಯೆ, ಶನಿವಾರ ಸುದ್ದಿಗೋಷ್ಟಿ ನಡೆಸಿದ ಭಟ್, ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಪಲಾಯನ ಮಾಡಲಾರೆ, ರಾಜಕಾರಣದಲ್ಲಿರುತ್ತೇನೆ ಎಂದು ಹೇಳಿರುವುದು ಅವರ ಅವರ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿಸಿದೆ. ಆದರೆ ರಘುಪತಿ ಭಟ್ ಕಾಂಗ್ರೆಸ್ ಆಹ್ವಾನ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top