ರಂಗನಪಲ್ಕೆ: ಡಾ. ಬಿ. ಆರ್ ಅಂಬೇಡ್ಕರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಕಾರ್ಕಳ : ಕೌಡೂರು ಗ್ರಾಮದ ರಂಗನಪಲ್ಕೆಯ ಶೇಡಿಗುಡ್ಡೆ ಕರಿಕುಮೆರಿ ಪಾತಾವುಗೆ ಸಂಪರ್ಕಿಸಿವ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದರು.





ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದ ರಾವ್ ಮಾತನಾಡಿ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಅಭಿವೃದ್ಧಿಯ ರಸ್ತೆಗಳು ಶೋಚನೀಯ ಸ್ಥಿತಿಯಲ್ಲಿ ಇದೆ ಎಂಬುವುದಕ್ಕೆ ಈ ರಸ್ತೆ ಉತ್ತಮ ಉದಾಹರಣೆಯಾಗಿದೆ. ಸ್ಥಳೀಯ ಪಂಚಾಯತ್ ಆದ ಬೈಲೂರು ಗ್ರಾಮ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನಹರಿಸದಿರುವುದು ವಿಷಾದನೀಯ ಎಂದರು. ಪ್ರತಿಭಟನೆ ಸ್ಥಳದಲ್ಲಿಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕರೆ ಮೂಲಕ ಮಾತನಾಡಿ ರಸ್ತೆಯ ಬಗ್ಗೆ ವಿವರಣೆ ಕೇಳಿದರು. ಎಂ. ಎಲ್. ಸಿ. ಫಂಡ್ ಮನವಿಪತ್ರ ತಯರಿಸಲು ಸೂಚಿಸಿದರು. ಎಮ್. ಯಲ್. ಸಿ ಮಂಜುನಾಥ್ ಭಂಡಾರಿ ಯವರಿಗೆ ಕರೆಮಾಡಿ ರಸ್ತೆಯ ಪರಿಸ್ಥಿತಿ ಬಗ್ಗೆ ವಿವರಿಸಿದರು.
ಎಂ ಎಲ್ ಸಿ ಮಂಜುನಾಥ ಭಂಡಾರಿಯವರು ಗ್ರಾಮಸ್ಥರಿಗೆ ರಸ್ತೆಯನ್ನು ಸರಿಪಡಿಸುವ ಬಗ್ಗೆ ಆಶ್ವಾಸನೆ ನೀಡಿದರು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರನ್ನು ಕರೆಮುಖಾಂತರ ಮಾತನಾಡಿ ಪ್ರತಿಭಟನಾಕಾರಿಗೆ ಭರವಸೆಯನ್ನು ನೀಡಿದರು.
ಪ್ರಮುಖರಾದ ಅಂತೋನಿ ಮಿರಾಂದಾ,ಪ್ರಿಯಾ ಯಲ್. ಜಿ, ರಾಧಾ, ಜೆನೆವಿವ್ ಡಿಸೊಜಾ, ಟ್ರೆಸ್ಸಿ ಮಿರಾಂದಾ ಸೇರಿದಂತೆ ಹತ್ತಾರು ಗ್ರಾಮಸ್ಥರು ರಸ್ತೆಯ ಕುಂದುಕೊರತೆಗಳನ್ನು ನಿವಾರಿಸಲು ಕ್ರಮಗೊಳ್ಳಬೇಕೆಂದು ಆಗ್ರಹಿಸಿದರು. ಮೂಲಸೌಕರ್ಯ ಒದಗಿಸಲು ಹಿಂದೇಟುಹಾಕುತ್ತಿರುವ ಬೈಲೂರು ಗ್ರಾಮಪಂಚಾಯತ್ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಪ್ರಿಯಾ ಕ್ವಾಡ್ರಾಸ್, ಬೈಲೂರು ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ಉದಯ ಶೆಟ್ಟಿ, ಬೈಲೂರು ಹಾಗೂ ಬೈಲೂರು, ಕಣಜಾರು, ಕೌಡೂರು ಬ್ಲಾಕ್ ಅಧ್ಯಕ್ಷರು ಹಾಜರಾಗಿ ಬೆಂಬಲ ಸೂಚಿಸಿದರು.




































