ಯೋಗವು ಆರೋಗ್ಯಕರ ಜೀವನದ ಅಡಿಪಾಯ

ಕಾರ್ಕಳ : ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತವಾಗಿ ಅಜೆಕಾರು ಜ್ಞಾನ ಸುಧಾ ಪದವಿಪೂರ್ವ ಕಾಲೇಜು ಮತ್ತು ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪದ್ಮನಗರ ಇಲ್ಲಿ ನಡೆದಂತಹ ಯೋಗ ದಿನಾಚರಣೆಯಲ್ಲಿ ಆರೋಗ್ಯಕರ ಜೀವನಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ವಿಶ್ವದ ಸಂಸ್ಕೃತಿ ಪರಂಪರೆಗೆ ಭಾರತ ಕೊಟ್ಟ ಅತ್ಯುತ್ತಮ ಕೊಡುಗೆ ಎಂದರೆ ಯೋಗ. ನಮ್ಮ ಪ್ರಾಚೀನ ಋಷಿಮುನಿಗಳ ಸಾವಿರಾರು ವರ್ಷಗಳ ಸಾಧನೆಯ ಫಲವಾಗಿ ಆವಿಷ್ಕಾರಗೊಂಡಿದ್ದೇ ಯೋಗ. ಯೋಗವು ಆರೋಗ್ಯಕರ ಜೀವನದ ಅಡಿಪಾಯವಾಗಿದೆ. ಮಾನವನಿಗೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವು ಅತ್ಯಗತ್ಯವಾಗಿದ್ದು ,ಅದಕ್ಕಾಗಿ ಈ ಯೋಗವು ಸಹಾಯ ಮಾಡುತ್ತದೆ. ಇದು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಲು, ನಮ್ಮ ದೇಹವು ಆರೋಗ್ಯ ಪೂರ್ಣವಾಗಿ ಸುಸ್ಥಿರತೆಯಲ್ಲಿರಲು, ಸಹಾಯಮಾಡುತ್ತದೆ. ಯೋಗ ಎಂಬುದು ಕೇವಲ ಒಂದು ದಿನದ ಆಚರಣೆ ಆಗಿರದೆ, ಜೀವನದ ಅವಿಭಾಜ್ಯ ಅಂಗವನ್ನಾಗಿಸಬೇಕು. ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಚಂದ್ರಿಕಾ ಕಿಣಿ ಅಭಿಪ್ರಾಯ ಪಟ್ಟರು.
9 ವಿದ್ಯಾರ್ಥಿ ಕುಮಾರ್ ಸೋಹನ್ ,ವಿಶ್ವ ಯೋಗ ದಿನಾಚರಣೆಯ ಮಹತ್ವದ ಕುರಿತಾಗಿ ತಿಳಿಸಿದನು.







































