ಯೋಗಪಟು ಡಾ. ಮಾಲತಿ ಪೈ ಯವರಿಗೆ ಸನ್ಮಾನ
ಕಾರ್ಕಳ : ಒಂದು ಭೂಮಿ ಒಂದು ಆರೋಗ್ಯ ಎಂಬ ಧ್ಯೇಯ ವಾಕ್ಯದಡಿಯಲ್ಲಿ 11ನೇ ಅಂತರಾಷ್ಟ್ರೀಯ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವರ್ಧಮಾನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.
ಡಾ.ಮಾಲತಿ ಪೈ ಅವರು ಯೋಗದ ಮಹತ್ವ ವನ್ನು ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ತಿಳಿಸಿದರು.
ಯೋಗಾಸನ ಪ್ರಾಣಾಯಾಮ ಧ್ಯಾನ ಇದರ ತರಬೇತಿಯನ್ನು ಮಮತಾ ಗಣೇಶ್ ಇವರು ನೆರವೇರಿಸಿಕೊಟ್ಟರು
ಮುಖ್ಯ ಅತಿಥಿಯಾಗಿ ಯೋಗಪಟು ಪಾಲ್ಗೊಂಡ ಡಾ. ಮಾಲತಿ ಪೈ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಆಡಳಿತ ಅಧಿಕಾರಿ ಕರ್ತವ್ಯ ಜೈನ್, ಅಧ್ಯಕ್ಷೆ ಶಶಿಕಲಾ ಹೆಗ್ಡೆ ಹಾಗೂ ಕುಮಾರಯ್ಯ ಹೆಗ್ಡೆ, ಜಗದೀಶ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.






























