ಯೋಗದೊಂದಿಗೆ ಅರಿವಿನ ಹೊನಲು ಶಕ್ತಿಶಾಲಿ ಮೆದುಳು
ಕಾರ್ಕಳ : ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ ಇಲ್ಲಿನ ವಾರ್ಷಿಕೋತ್ಸವ ದಿನದಂದು ಡಾ. ಮಾಲತಿ ಪೈ ಇವರು ಬರೆದಿರುವ “ಯೋಗದೊಂದಿಗೆ ಅರಿವಿನ ಹೊನಲು ಶಕ್ತಿಶಾಲಿ ಮೆದುಳು” ಎನ್ನುವ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಡಾ. ಬೋಳ ವಿಠ್ಠಲ್ ಶೆಟ್ಟಿ ಟ್ರಸ್ಟಿನ ಸಂಚಾಲಕರಾಗಿರುವ ಮುಂಬೈಯ ವಕೀಲ ಸುನಿಲ್ ಶೆಟ್ಟಿ ಪುಸ್ತಕ ಲೋಕಾರ್ಪಣೆಗೈದರು.

ಎಸ್ಡಿಎಂಸಿ ಯ ಅಧ್ಯಕ್ಷ ವಿಶ್ವನಾಥ್ ಪ್ರಭು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾಲೇಜಿನ ಅಧ್ಯಕ್ಷ ಸೂರ್ಯಕಾಂತ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ರೇಷ್ಮಾ ಉದಯ್ ಕುಮಾರ್, ಆಶಾ ದೇವೇಂದ್ರ ಶೆಟ್ಟಿ , ತುಕಾರಾಂ ಶೆಟ್ಟಿ ಮುರಳಿಧರ ಜೋಗಿ ಸರ್ವಜ್ಞ ತಂತ್ರಿ ನ್ಯಾಯವಾದಿಗಳು ಜನಾರ್ಧನ್ ಭಟ್, ಸುಕುಮಾರ್ ಶೆಟ್ಟಿ ಪೆರಾಡಿ ಹಾಗೂ ಕಾಲೇಜಿನ ಪ್ರಾಂಶುಪಾಲ ವಸಂತ ಆಚಾರ್, ಶಾಲಾ ಮುಖ್ಯಸ್ಥ ಗೋಪಾಲ್ ಉಪಸ್ಥಿತರಿದ್ದರು.
ಜಯಂತಿ ಶೆಟ್ಟಿ ನಿರೂಪಿಸಿದರು. ಆರತಿ ಧನ್ಯವಾದ ಸಲ್ಲಿಸಿದರು.

































