ಯೋಗದಿಂದ ಆರೋಗ್ಯ ವೃದ್ಧಿ
ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ದಿನಾಚರಣೆಯು ಕಾರ್ಕಳ ನ್ಯಾಯಲಯದ ಆವರಣದಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗೌರವಾನ್ವಿತ ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ ಶರ್ಮಿಳಾ ಸಿ.ಎಸ್. ಮಾತನಾಡಿ ಯೋಗವನ್ನು ವಿಶ್ವದಾದ್ಯಂತ ಆಚರಿಸುತ್ತಿದ್ದು, ಭಾರತವೇ ಯೋಗಕ್ಕೆ ಗುರುವಾಗಿದೆ. ಎಲ್ಲರೂ ದಿನನಿತ್ಯ ಸ್ವಲ್ಪ ಹೊತ್ತಾದರೂ ಯೋಗವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಯೋಗಶಿಕ್ಷಕ ಅಶೋಕ್ ಜಿ. ಮಾತನಾಡಿ ದೈಹಿಕ ಹಾಗೂ ಮಾನಸ್ಸಿಕ ದೃಢತೆ ಹೆಚ್ಚಿಸುವಲ್ಲಿ ಯೋಗ ಮಹತ್ತರ ಪಾತ್ರವಹಿಸುತ್ತದೆ. ಸಮಸ್ತ ಸಮಸ್ಯೆಗಳನ್ನು ಯೋಗವು ದೂರ ಮಾಡುವುದೆಂದು ತಿಳಿಸಿದರು.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ, ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ನ್ಯಾಯವಾದಿಗಳು ಮತ್ತು ನ್ಯಾಯಾಲಯದ ಎಲ್ಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.












