ಯು ಪಿ ಎಸ್ ಸಿ ಹಾಗೂ ಕೆ ಪಿ ಎಸ್ ಸಿ ಪರೀಕ್ಷೆಗಳಿಗೆ ಆಳ್ವಾಸ್ ನಿಂದ ಪರಿಪೂರ್ಣ ತರಬೇತಿ
ಬೆಂಗಳೂರಿನ ಸಾಧನ ಕೋಚಿಂಗ್ ಒಡಂಬಡಿಕೆಯಲ್ಲಿ…..
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಯಾವುದೇ ಪದವಿ ಪಡೆದವರಿಗೆ ಅಕ್ಟೋಬರ್ ತಿಂಗಳಿನಿಂದ 9 ತಿಂಗಳ ಸನಿವಾಸ ತರಬೇತಿಯನ್ನು ಆಸಕ್ತರಿಗೆ ನೀಡಲು ಆಳ್ವಾಸ್ ನಿಶ್ಚಯಿಸಿದೆ. ವೃತ್ತಿ ಪರ ಕೋರ್ಸುಗಳಿಗೆ ಯಶಸ್ವಿ ತರಬೇತಿ ನೀಡಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿರುವ ಆಳ್ವಾಸ್ ಇದೀಗ ಯು ಪಿ ಎಸ್ ಸಿ, ಕೆ ಪಿ ಎಸ್ ಸಿ, ಎಸ್ ಡಿ ಎ, ಎಫ್ ಡಿ ಎ, ಬ್ಯಾಂಕಿಂಗ್, ಪೊಲೀಸ್ ಇನ್ನಿತರ ಎಲ್ಲ ಸರಕಾರಿ ಉದ್ಯೋಗಗಳಿಗೆ ಅನುವು ಮಾಡಿಕೊಡುವ ಸ್ಪರ್ಧಾತ್ಮಕ ತರಬೇತಿಯನ್ನು ನೀಡಲು ಸಜ್ಜುಗೊಂಡಿದೆ. ಈ ತರಬೇತಿಯಲ್ಲಿ ನಿರಂತರ ಮಾದರಿ ಪರೀಕ್ಷೆಗಳು, ಸಂದರ್ಶನ ಎದುರಿಸುವ ಕಲೆ, ವಿವಿಧ ಟೆಸ್ಟ್ ಗಳು ನಡೆದು ಕನ್ನಡ ಹಾಗೂ ಇಂಗ್ಲಿಷ್ ಎರಡು ಮಾಧ್ಯಮದಲ್ಲಿ ಅನುಭವಿ ಶಿಕ್ಷಕರಿಂದ ತರಬೇತಿ, ಅಧ್ಯಯನ ಸಾಮಗ್ರಿ, ವಿದ್ಯುನ್ಮಾನ ಪ್ರತಿ ಒದಗಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ತಿಳಿಸಿದರು.
ಇದರಿಂದಾಗಿ ಕರಾವಳಿ ಹಾಗೂ ಮಲೆನಾಡಿನ ಸಾಕಷ್ಟು ವಿದ್ಯಾರ್ಥಿಗಳಿಗೆ ಸರಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯ ಲಭಿಸಲು ಸಾಧ್ಯವಿದೆ. ಇಲ್ಲಿ ಬಹಳ ಉತ್ತಮ ಗುಣಮಟ್ಟದ, ಅತ್ಯುತ್ತಮ ತರಬೇತಿಯನ್ನು ಅತ್ಯಂತ ನುರಿತ ಶಿಕ್ಷಕರಿಂದ ನೀಡಲು ಉದ್ದೇಶಿಸಿದೆ ಎಂದು ಬೆಂಗಳೂರು ಸಾಧನ ಸಂಸ್ಥೆಯ ಮುಖ್ಯಸ್ಥ ನಿರ್ದೇಶಕಿ ಡಾ. ಜ್ಯೋತಿ ಅವರು ತಿಳಿಸಿದರು. ಇದು ನಿರಂತರ ಸನಿವಾಸ ತರಬೇತಿಯಾದುದರಿಂದ ವಿದ್ಯಾರ್ಥಿಗಳು ಬಹಳ ಉತ್ತಮವಾಗಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತುಗೊಳ್ಳಲು ಅತ್ಯುತ್ತಮ ಅವಕಾಶವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನೀಡಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಕುರಿಯನ್ ತಿಳಿಸಿದರು.
ಯು ಪಿ ಎಸ್ ಸಿ, ಕೆಪಿಎಸ್ಸಿ, ಪರೀಕ್ಷಾ ಸ್ಪರ್ಧಾತ್ಮಕ ತರಬೇತಿಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ 9480105446, 7259 00 6 116, 9740668967, 9902488801






































