ಯುವ ಜನತೆ ದೇಶಭಕ್ತಿಯೊಂದಿಗೆ ಬದುಕನ್ನು ಅರಳಿಸುವ ಸತ್ಕಾರ್ಯ ನಡೆಸಲಿ

Picture of RB NEWS

RB NEWS

Bureau Report

ಉಡುಪಿ : ಯುವ ಜನತೆ ದೇಶಭಕ್ತಿಯೊಂದಿಗೆ ಬದುಕನ್ನು ಅರಳಿಸುವ ಸತ್ಕಾರ್ಯ ನಡೆಸಬೇಕು. ಸ್ತ್ರೀ ಶಕ್ತಿ ರಾಷ್ಟ್ರಶಕ್ತಿಯಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ವೀರರಾಣೆ ಅಬ್ಬಕ್ಕ ಅವರ ದಿಟ್ಟತನ ಅವಿಸ್ಮರಣಿಯ ಎಂದು ಭಾಷಾ ಪಾಂಡಿತ್ಯದ ಸಾಹಿತಿ, ಡಾ. ಮಾಲತಿ ಪೈ ಹೇಳಿದರು.

ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕರ ಸಂಘ (ರಿ) ಮಂಗಳೂರು ವಿಭಾಗ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಹಯೋಗದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರ ವನಿತೆ ರಾಣಿ ಅಬ್ಬಕ್ಕದೇವಿಯವರ ಪ್ರೇರಣಾದಾಯಿ 100 ಉಪನ್ಯಾಸಗಳ ಸಂಚಿಕೆ ಎಸಳು – 23 ಅಬ್ಬಕ್ಕ@500
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಷ್ಠಿತ ಎಂಜಿಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಬಡಗುತಿಟ್ಟು ಯಕ್ಷಗಾನ ಕಲಾವಿದ ಯಕ್ಷಗಾನ ಬಯಲಾಟದ ಅಕಾಡೆಮಿ ಅಧ್ಯಕ್ಷ ,ಶಿಕ್ಷಣ – ಕಲಾ ಸೇವಾ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಪ್ರೊ. ಎಂ ಎಲ್.ಸಾಮಗ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಾ. ಜೈ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಕಾರ್ಯಕ್ರಮದ ಸಂಯೋಜಕಿ ಡಾ. ಶ್ರೀಮತಿ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಸಂಯೋಜಿಸಿ, ನಿರೂಪಿಸಿದರು.

ಹಿಂದಿ ಭಾಷಾ ಉಪನ್ಯಾಸಕ ಡಾ. ಅನಂತ್ ರಾಮ್ ನಾಯಕ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.

ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪರಮೇಶ್ವರ. ಎಂ.ಮೊಗವೀರ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top