ಯುವಶಕ್ತಿ ದೇಶದ ಅಡಿಪಾಯ
ಕಾರ್ಕಳ: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಆಗಲೇಬೇಕು. ಸುಭದ್ರವಾದ ದೇಶದ ಅಡಿಪಾಯವು ಯುವಶಕ್ತಿಯಲ್ಲಿ ಅಡಗಿದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೊಂದಲು ಪ್ರೇರೇಪಿಸುತ್ತದೆ. ಡ್ರಗ್ಸ್ ನಂತಹ ಮಾದಕ ವ್ಯಸನಕ್ಕೆ ಬಲಿಯಾಗಬಾರದು. ಜಾಲತಾಣಗಳಲ್ಲಿ ಬರುವ ನಕಾರಾತ್ಮಕ ವದಂತಿಗಳಿಗೆ ತಟ್ಟನೆ ಪ್ರತಿಕ್ರಿಯಿಸುವುದನ್ನು ಬಿಡಬೇಕು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ರಾಷ್ಟಿçÃಯ ಸೇವಾ ಯೋಜನೆಯಂತಹ ಚಟುವಟಿಕೆಗಳು ಬದುಕನ್ನು ಕಲಿಸುತ್ತವೆ ಎಂದು ಅಜೆಕಾರು ಠಾಣೆಯ ಉಪನಿರೀಕ್ಷ ರವಿ ಕೆ ಅವರು ಹೇಳಿದರು.ಅವರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿನ ೨೦೨೪-೨೫ನೇ ಸಾಲಿನ ಎನ್ ಎಸ್ ಎಸ್ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಮಂಜುನಾಥ ಎ ಕೋಟ್ಯಾನ್ ಮಾತನಾಡಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಕೆಲವು ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಯುವಜನತೆಗೆ ಇಂದು ತಾಳ್ಮೆಯ ಅಗತ್ಯವಿದೆ. ಅದು ನಮ್ಮನ್ನು ಯಾವಾಗಲೂ ಬಲಿಷ್ಠವಾಗಿರಿಸುತ್ತದೆ. ಎನ್ ಎಸ್ ಎಸ್ ಅದನ್ನು ಕಲಿಸುತ್ತದೆ. ಮಾನವೀಯತೆಯೇ ಅದರ ಧರ್ಮ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ ದತ್ತಾತ್ರೇಯ ಮಾರ್ಪಳ್ಳಿ, ಯೋಜನಾಧಿಕಾರಿ ಶಂಕರ ಕುಡ್ವ, ಸಹಯೋಜನಾಧಿಕಾರಿ ಗೀತಾ, ದೀಪಾ ಶೆಟ್ಟಿ, ಕಾರ್ಯದರ್ಶಿ ಹಿತಾ ಸಹ ಕಾರ್ಯದರ್ಶಿ ನಿತಿನ್ ಉಪಸ್ಥಿತರಿದ್ದರು. ನಿತಿನ್ ಸ್ವಾಗತಿಸಿ ತ್ರಿಶಲ್ ವಂದಿಸಿದರು. ಅನನ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





































