ಯುವವಾಹಿನಿ(ರಿ.) ಮಾಣಿ ಘಟಕದಿಂದ ಧ್ವಜ ಸ್ತಂಭ ಕೊಡುಗೆ ಹಾಗೂ ಸ್ವಾತಂತ್ರ್ಯ ದಿನಾಚರಣೆ

Picture of RB NEWS

RB NEWS

Bureau Report

ಕಲ್ಲಡ್ಕ : ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ಕೊರಗಪ್ಪ ನಾಯ್ಕ ಧ್ವಜಾರೋಹಣ ನೆರವೇರಿಸಿದರು.

ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಂದ ಶಾಲೆಯಿಂದ ವೀರಕಂಬ ಗ್ರಾಮ ಪಂಚಾಯತಿ ನ ತನಕ ಪ್ರಭಾತ ಭೇರಿ ನೆರವೇರಿತು ಈ ಕಾರ್ಯಕ್ರಮಕ್ಕೆ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಾತಾ ಡೆವಲಪರ್ಸ್ ಸುರತ್ಕಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ರವರು ಚಾಲನೆ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್, ,ಕಾರ್ಯದರ್ಶಿ ರಾಮ್ ಪ್ರಸಾದ್ ಕೊಂಬಿಲ,ವೀರಕಂಭ ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ಸುನಿಲ್, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ರಮೇಶ್ ಗೌಡ ಮೈರಾ, ವಿದ್ಯಾರ್ಥಿ ನಾಯಕಿ ಧನ್ವಿತ ಉಪಸ್ಥಿತರಿದ್ದರು.

ಹಿರಿಯ ಪ್ರಾಥಮಿಕ ಶಾಲೆ ಮಂಕುಡೆ ಇಲ್ಲಿಂದ ವರ್ಗಾವಣೆಗೊಂಡು ಬಂದ ದೈಹಿಕ ಶಿಕ್ಷಕರಾದ ಇಂದುಶೇಖರ್ ಕುಲಾಲ್ ರವರನ್ನು ಎಸ್ ಡಿ ಎಂ ಸಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ಪರವಾಗಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು

ಶಾಲೆಯಲ್ಲಿ ತಂತ್ರಜ್ಞಾನದ ಮೂಲಕ ಶಿಕ್ಷಣವನ್ನು ನೀಡಿ ಮಕ್ಕಳಲ್ಲಿ ಆಸಕ್ತಿದಾಯಕ ಅಭ್ಯಾಸಗಳನ್ನು ಮೂಡಿಸುವ ಸಲುವಾಗಿ ಎಸ್ ಎಲ್ ಸಿ ಕನ್ಸ್ ಟ್ರಕ್ಷನ್ ನೆಲ್ತೊಟ್ಟು ಅನಂತಾಡಿ ಇವರು ಶಾಲೆಗೆ ಸ್ಮಾರ್ಟ್ ಟಿವಿ ನೀಡಿದ್ದು ಅದನ್ನು ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮತ್ತು ಎಸ್ ಡಿ ಎಂ ಸಿ ಗೆ ಹಸ್ತಾಂತರಿಸಲಾಯಿತು

ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು,

ಸಂಘ ಸಂಸ್ಥೆಗಳು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ,ಹಾಗೂ ಶಾಲಾಭಿಮಾನಿಗಳು ವೈಯಕ್ತಿಕವಾಗಿ ಸಿಹಿ ತಿಂಡಿ ನೀಡಿ ಸಹಕರಿಸಿದರು.

ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಶಿಕ್ಷಕಿ ಅನುಷಾ ವಂದಿಸಿ. ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.

ಕಲ್ಲಡ್ಕ : ಯುವವಾಹಿನಿ(ರಿ.) ಮಾಣಿ ಘಟಕದ ವತಿಯಿಂದ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಕೊಂಕಣಪದವು ಅಂಗನವಾಡಿ ಕೇಂದ್ರಕ್ಕೆ ನೂತನ ಧ್ವಜ ಸ್ತಂಭ ವನ್ನು ನಿರ್ಮಿಸಿ ಕೊಡುವುದರ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಂಗನವಾಡಿ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಘಟಕದ ಅಧ್ಯಕ್ಷ ನಾಗೇಶ್ ಕೊಂಕಣಪದವು ರವರು ಅಂಗನವಾಡಿ ಕೇಂದ್ರಕ್ಕೆ ಧ್ವಜ ಸ್ತಂಭವನ್ನು ನಿರ್ಮಿಸಿ ಕೊಡುವಂತ ಭಾಗ್ಯ ನಮ್ಮದಾಯಿತು. ಇಂತಹ ಸಮಾಜಮುಖಿ ಕಾರ್ಯವನ್ನು ಘಟಕದ ವತಿಯಿಂದ ಮಾಡಿರುವುದು ಸಂತೋಷದ ವಿಷಯ. ಧ್ವಜ ಸ್ತಂಭ ನಿರ್ಮಾಣಕ್ಕೆ ಧನಸಹಾಯ ನಿಡಿದ ಸದಸ್ಯರಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಘಟಕದ ವತಿಯಿಂದ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿ ಶಾಲಿನಿ ಜಗದೀಶ್,ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿ ಕುಮಾರಿ,ಸದಸ್ಯರಾದ ರಾಜರಾಮ್ ಭಟ್ ಕಡೂರು,ಮಾಜಿ ಪಂಚಯಾತಿ ಸದಸ್ಯರು ಉಮೇಶ್ ಎಸ್ ಪಿ ಪೆರಾಜೆ, ಮಾಣಿ ಸರ್ಕಾರಿ ಶಾಲೆಯ ಶಾಲಾಭಿವೃದ್ದಿಯ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ,ಅಂಗನವಾಡಿ ಕೇಂದ್ರದ ಸಮಿತಿಯ ಅಧ್ಯಕ್ಷೆ ಯಶೋಧ,ಘಟಕದ ನಿರ್ದೇಶಕ ಸತೀಶ್ ಮುರುವ, ಸದಸ್ಯರಾದ ಬಾಲಕೃಷ್ಣ ಶೇರಾ,ರಾಜೇಶ್ ಬಲ್ಯ, ಅಂಗನವಾಡಿಯ ಶಿಕ್ಷಕಿ ರಕ್ಷಿತಾ ಸಹಯಾಕಿ ಹೇಮಾವತಿ,ಮಕ್ಕಳು,ಪೊಷಕರು ಹಾಗೂ ಗ್ರಾಮದ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top