ಯುವತಿ ಬಾಳಿಗೆ ಯಮನಾದ ಭಗ್ಮಪ್ರೇಮಿ!
ಉಡುಪಿ: ಭಗ್ನಪ್ರೇಮಿಯೊಬ್ಬನ ಕರಾಳ ಕೃತ್ಯಕ್ಕೆ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಅಂತ್ಯಕಂಡಿದ್ದಾಳೆ.
ಬ್ರಹ್ಮಾವರ ಕೊಕ್ಕರ್ಣೆಯ ಪೂಜಾರಿಬೆಟ್ಟು ನಿವಾಸಿ ರಕ್ಷಿತಾ ಪ್ರಾಣತೆತ್ತ ನತದೃಷ್ಠೆ.
ನೆರೆಕರೆಯ ಕಾರ್ತಿಕ್ ಪೂಜಾರಿ ಪ್ರಕರಣ ಆರೋಪಿ.
ರಕ್ಷಿತಾ ಹುಟ್ಟುಹಬ್ಬದ ಸಂಭ್ರಮದ ನಡುವೆ ಎಂದಿನಂತೆ ಕಾಯಕಕೆಂದು ಮನೆಯಿಂದ ಕೆಲಸಕ್ಕೆಂದು ಹೊರಟು ಬಸ್ಸಿಗಾಗಿ ಕಾಯುತ್ತಿದ್ದರೆ, ಅಲ್ಲಿ ಎದುರುಗೊಂಡಿದ್ದು ಭಗ್ನಪ್ರೇಮಿ ಕಾರ್ತಿಕ್ ಪೂಜಾರಿ.
ತನ್ನನ್ನು ಮದುವೆಯಾಗುವಂತೆ ಒತ್ತಾಯ ಏರಿದ್ದಾನೆ. ಆತನ ಕೋರಿಕೆಯನ್ನು ಕಡ್ಡಿಮುರಿದಂತೆ ಯುವತಿ ತಿರಸ್ಕರಿಸಿದ್ದಾಳೆ.
ಇದರಿಂದ ದಿಕ್ಕುದೋಚದೇ ಹೋದ ಭಗ್ನಪ್ರೇಮಿ ಪೂರ್ವ ನಿಗದಿಯಂತೆ ಪ್ಯಾಂಟ್ ನಲ್ಲಿ ಅಡಗಿಸಿಟ್ಟು ಚೂರಿಯಿಂದ ಯುವತಿಗೆ ದೇಹದ ಅಲ್ಲಲ್ಲಿ ಇರಿದು ಬಂದ ಬೈಕ್ ನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ.
ರಕ್ತ ರಕ್ತ ಸ್ರಾವದಲ್ಲಿ ಸ್ಥಳದಲ್ಲಿ ಕುಸಿದು ಬಿದ್ದಯ ಯುವತಿಯನ್ನು ಸ್ಥಳೀಯರು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ದೃಢಪಡಿಸಿದೆ.
ಆರಂಭದಲ್ಲಿ ಸ್ನೇಹ, ಪ್ರೇಮ ನಂತರ ತಿರಸ್ಕಾರ
ರಕ್ಷಿತಾ ಕುಟುಂಬವು ಆಕೆಯ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಕೆ ಕಳೆದ ಎರಡು ವಾರಗಳಿಂದ ಆರೋಪಿಯ ಫೋನ್ ಸಂಖ್ಯೆಯನ್ನು ನಿರ್ಬಂಧಿಸಿದ್ದಾಳೆ.
ಆಕೆಯ ಹುಟ್ಟುಹಬ್ಬದ ದಿನದಂದು ಮದುವೆ ಆಗುವಂತೆ ಒತ್ತಾಯಿಸಿದ್ದ, ಇದನ್ನು ಸ್ಪಷ್ಟವಾಗಿ ನಿರಾಕರಿಸಿದನ್ನು ಕೇಳಿ ಕೋಪಗೊಂಡ ಕಾರ್ತಿಕ್ ಆಕೆಗೆ ಚಾಕುವಿನಿಂದ ಹಲ್ಲೆ ನಡೆಸಿದ ಇದರಿಂದ ಆಕೆಯ ಕುತ್ತಿಗೆ ಮತ್ತು ಎದೆಯ ಬಳಿ ಪಕ್ಕೆಲುಬಿನ ಎರಡೂ ಬದಿಗಳಲ್ಲಿ ಗಂಭೀರ ಗಾಯವಾಗಿತ್ತು ಮಣಿಪಾಲ ಆಸ್ಪತ್ರೆಯಲ್ಲಿ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.



































