ಯುವತಿಯ ಖಾಸಗಿ ಭಾಗಕ್ಕೆ ಕೈ ಹಾಕಿದ ಕಂಡಕ್ಟರ್! ಸೇವೆಯಿಂದ ಅಮಾ‌ತುಗೊಳಿಸಿದ ಕೆ ಎಸ್ ಆರ್ ಟಿ ಸಿ

Picture of RB NEWS

RB NEWS

Bureau Report

ಮಂಗಳೂರು : ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನಿರ್ವಾಹಕನೊಬ್ಬನಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಮಾನತುಗೊಳಿಸಿದೆ.

ಮುಡಿಪು ಕಡೆಗೆ ಪ್ರಯಾಣಿಸುತ್ತಿದ್ದ ಯುವತಿ ನಿದ್ದೆಗೆ ಒಳಗಾಗಿರುವುದನ್ನು ಗಮನಿಸಿದ ನಿರ್ವಾಹಕ, ಯುವತಿಯ ಬದಿಯಲ್ಲಿ ನಿಂತು ತನ್ನ ಕೈಯನ್ನು ಯುವತಿಯ ಖಾಸಗಿ ಭಾಗದತ್ತ ಸ್ವರ್ಶಿಸುತ್ತಿದ್ದನು. ಈ ದೃಶ್ಯಾವಳಿಯನ್ನು ಇತರ ಪ್ರಯಾಣಿಕರೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.

ಗುರುವಾರದಂದು ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಗರಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಣಾಜೆ ಪೊಲೀಸರು
ಬಾಗಲಕೋಟೆ ಮೂಲದ ಪ್ರದೀಪ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆಯಲ್ಲಿ ಪ್ರಕರಣದ ಆರೋಪಿ ಪ್ರದೀಪ್ ಸೇವೆಯಿಂದ ಅಮಾನತ್ ಗೊಂಡಿದ್ದಾನೆಂಬ ಮಾಹಿತಿ ಲಭಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top